ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲು ಲೇಔಟ್ ನಲ್ಲಿ ಯಾವುದೇ ಬಾಂಗ್ಲಾ ವಲಸಿಗರು ಇಲ್ಲ. ಮನೆಗಳ ತೆರವು ಸಂಬಂಧ ಎಲ್ಲಾ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಲ್ಲಿರುವವರ ಪಟ್ಟಿ ತರಿಸಿಕೊಂಡು ನೋಡಿದ್ದೇನೆ. ಅದರಲ್ಲಿ ಯಾವುದೇ ಬಾಂಗ್ಲಾ ನಿವಾಸಿಗಳು ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.








