ಬೆಂಗಳೂರು : ಲವರ್ಸ್ ಜೊತೆ ಮೋಜು ಮಸ್ತಿ ಮಾಡಲು ಕಳ್ಳತನ ಮಾಡಿದ್ದವರ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ವಿದ್ಯಾರ್ಥಿಗಳನ್ನು ಇದೀಗ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಕಾಂ ಪದವಿ ಓದುತ್ತಿದ್ದ ಯಶವಂತ ರಮೇಶ್ ಮತ್ತು ತನುಷ್ ಬಂಧಿತರು ಎಂದು ತಿಳಿದು ಬಂದಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಈ ಮೂವರು ಬಿಕಾಂ ಪದವಿ ಓದುತ್ತಿದ್ದರು ಲವರ್ಸ್ ಜೊತೆಗೆ ಗೋವಾಕ್ಕೆ ಹೋಗುವುದಕ್ಕೆ ಇವರ ಬಳಿ ಹಣ ಇರಲಿಲ್ಲ. ಹಾಗಾಗಿ ಮೂರು ವಿದ್ಯಾರ್ಥಿಗಳು ಮನೆಗಳ್ಳತನದ ಹಾದಿ ಹಿಡಿದಿದ್ದರು. ಪರಿಚಯಸ್ಥ ಶ್ರೀನಿವಾಸ್ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.ಕಳ್ಳತನ ಮಾಡಿ ಲವರ್ಸ್ ಜೊತೆಗೆ ಹೋಗಿದ್ದರು. ಗೋವಾ ಪಾರ್ಟಿ ಮುಗಿಸಿ ಬರುತ್ತಿದ್ದಂತೆ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ್ದಾರೆ ಕೊತ್ತನೂರು ಠಾಣೆ ಪೋಲಿ ಹೆಸರಿಂದ ಮೂವರು ವಿದ್ಯಾರ್ಥಿಗಳ ಬಂಧನವಾಗಿದೆ.ಬಂದಿತರಿಂದ ಅರ್ಧ ಕೆಜಿಗು ಹೆಚ್ಚು ಚಿನ್ನಾಭರಣ ಮತ್ತು 10 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.