ಬೆಂಗಳೂರು : ಶಬರಿಮಲೈ ದೇಗುಲದಲ್ಲಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಪೊನ್ನಿ ಉನ್ನಿಕೃಷ್ಣನ್ ಮನೆಯ ಮೇಲೆ ಕೇರಳ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಮೇಲೆ ದಾಳಿ ಮಾಡಿದ್ದಾರೆ.
ನಾಲ್ವರು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ತಿರುವನಂತಪುರದಲ್ಲಿ ಉನ್ನಿಕೃಷ್ಣನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ಭಾಗವಾಗಿ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಲು ಪ್ರಮುಖ ಆರೋಪಿಯಾಗಿರುವ ಪೊನ್ನಿ ಉನ್ನಿಕೃಷ್ಣನ್ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯಲ್ಲಿ ಕೂಡ ಕೇರಳದ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಬಳ್ಳಾರಿ ರೊದ್ದಂ ಜುವೆಲರಿ ಶಾಪ್ನಲ್ಲಿ ಮೇಲೆ ದಾಳಿ ಮಾಡಿದ್ದಾರೆ. ಕದ್ದ ಚಿನ್ನದಲ್ಲಿ 476 ಗ್ರಾಂ ಚಿನ್ನ ಖರೀದಿಸಲಾಗಿತ್ತು. ರೊದ್ದಂ ಗೋಲ್ಡ್ ಮಾಲಿಕ ಗೋವರ್ಧನ್ ಖರೀದಿಸಿದ್ದರು. 476 ಚಿನ್ನವನ್ನು ಕೇರಳ ಎಸ್ಐಟಿ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ಗೋವರ್ಧನ್ ವಿಚಾರಣೆ ಮಾಡಿ ಚಿನ್ನವಶಕ್ಕೆ ಪಡೆದಿದ್ದಾರೆ. ಇದೀಗ ರೊದ್ಧಂ ಜುವೆಲ್ಲರಿ ಶಾಪ್ ಗೆ ಬೀಗ ಹಾಕಿದ್ದಾರೆ.








