ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ ಕಳ್ಳತನವಾಗಿದ್ದು, 3 ಲಕ್ಷ ರೂ. ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ 3 ಲಕ್ಷ ರೂ. ಕಳ್ಳತನವಾಗಿದೆ. ಹೊಸಕೆರೆಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ 3 ಲಕ್ಷ ರೂ. ಹಣ ಕಳವು ಮಾಡಲಾಗಿದೆ. ಚೆನ್ನಮ್ಮನ್ನ ಅಚ್ಚುಕಟ್ಟ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಮನೆ ಕೆಲಸದವರ ಮೇಲೆಯೇ ಅನುಮಾನ ಇದ್ದು, ದೂರು ದಾಖಲಿಸಲಾಗಿದೆ.
ಸೆಪ್ಟೆಂಬರ್ 4 ರಂದು ವಿಜಯಲಕ್ಷ್ಮೀ ಮೈಸೂರಿಗೆ ಹೋಗಿದ್ದರು. ಈ ವೇಳೆ ಮ್ಯಾನೇಜರ್ ಗೆ ಹಣ ಕೇಳಿದ್ದರು. ಕಬೋರ್ಡ್ ನಲ್ಲಿ ಹಣ ಕೊಟ್ಟು, ಉಳಿದ ಹಣವನ್ನು ಅಲ್ಲೇ ಇಟ್ಟು ಬೀಗ ಹಾಕಿ ತಾಯಿಗೆ ಬೀಗ ಕೊಟ್ಟು ಹೋಗಿದ್ದರು. ಸೆಪ್ಟೆಂಬರ್ 7 ರಂದು ಮೈಸೂರಿನಿಂದ ವಿಜಯಲಕ್ಷ್ಮೀ ವಾಪಾಸ್ ಆಗಿದ್ದರು. ಸೆ.8 ರಂದು ಹಣ ಕಳ್ಳತನವಾಗಿದೆ ಎಂದು ದೂರು ಸಲ್ಲಿಸಲಾಗಿದೆ.








