ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಜನ ಕಾಲ್ತುಳಿತದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅಮಾನತು ಹಿನ್ನೆಲೆಯಲ್ಲಿ ಅಮಾನತು ರದ್ದು ಪಡಿಸಿದ ಸಿಇಟಿ ಆದೇಶ ಪ್ರಶ್ನೆ ಸಿ ಮೇಲ್ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ವೇಳೆ ಪೊಲೀಸರ ಅಮಾನತುಕ್ರಮವನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತು.
ರಾಜ್ಯ ಸರ್ಕಾರದ ಪರವಾಗಿ ಪಿ. ಎಸ್ ರಾಜಗೋಪಾಲ್ ವಾದ ಮಂಡಿಸಿದರು ಅನುಮತಿ ಕೇಳಿದ ದಿನವೇ ಪೊಲೀಸರು ಅನುಮತಿ ನಿರಾಕರಿಸಬೇಕಿತ್ತು ಅನುಮತಿ ನೀಡದಿದ್ದರೂ ಪೊಲೀಸ್ ಆಯುಕ್ತಾರಾದಿಯಾಗಿ ಎಲ್ಲರೂ ಸಿದ್ಧತೆ ಆರಂಭಿಸಿದ್ದಾರೆ.ಪೊಲೀಸ್ ಆಯುಕ್ತರು ಅಂದು ಬೆಳಗ್ಗೆ 11:40ಕ್ಕೆ ಬಂದೋ ಬಸ್ತ್ ಗೆ ಸೂಚನೆ ನೀಡಿದ್ದಾರೆ. ಮೆರವಣಿಗೆಗೆ ಅನುಮತಿ ನಿರಾಕರಿಸಿದರೆ ನಿಬಂಧನೆ ಏಕೆ ವಿಧಿಸಲಿಲ್ಲ?
ಪೊಲೀಸರು ಕಾರ್ಯಕ್ರಮ ನಡೆಸಿದಂತೆ ನಿರ್ಬಂಧ ವಿಧಿಸಬಹುದಿತ್ತು. ದುರ್ಘಟನೆಯಿಂದ ಸರ್ಕಾರಕ್ಕೆ ಮುಜುಗರವಾಗಿದ್ದರಿಂದ ಅವರನ್ನು ಅಮಾನತು ಪಡಿಸಲಾಗಿದೆ ಎಂದು ಪೊಲೀಸರ ವಿರುದ್ಧವೇ ರಾಜ್ಯ ಸರ್ಕಾರ ಆರೋಪಿಸಿತು. ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ವರದಿ ನೀಡಿತ್ತು ಗುಪ್ತಚರ ಇಲಾಖೆಯ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ವರದಿಯನ್ನು ಹೈಕೋರ್ಟ್ ಗಮನಿಸಿದರೆ ನಮ್ಮ ಕ್ರಮ ಸರಿಯೇನಿಸಬಹುದು ಎಂದು ಸರ್ಕಾರದ ಪರ ಹಿರಿಯ ವಕೀಲ ಪಿ ಎಸ್ ರಾಜಗೋಪಾಲ್ ವಾದ ಮಂಡಿಸಿದರು.