ಕೊಪ್ಪಳ : ರಾಬಕೋವಿ ಹಾಲು ಒಕ್ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಮೇಲುಗೈ ಸಾಧಿಸಿದ್ದು, ರಾಘವೇಂದ್ರ ಹಿಟ್ನಾಳರನ್ನು ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಿದ ರಾಜ್ಯ ಸರ್ಕಾರ. ರಾಬಕೋವಿ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆ ಜಿದ್ದಾಜಿದ್ದಿ ನಡೆದಿತ್ತು. ರಾಘವೇಂದ್ರ ಹಿಟ್ನಾಳ್ ಮತ್ತು ಭೀಮಾ ನಾಯಕ್ ನಡುವೆ ಜಿದ್ದಾಜಿದ್ದಿ ನಡೆದಿತ್ತು.
ಶತಾಯಗತಾಯ ರಾಬಕೋವಿ ಅಧ್ಯಕ್ಷರಾಗಲು ರಾಘವೇಂದ್ರ ಹಿಟ್ನಾಳ್ ತೀರ್ಮಾನಿಸಿದರು. ಒಕ್ಕೂಟಕ್ಕೆ ಸತತವಾಗಿ ಭೀಮಾ ನಾಯ್ಕ್ ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಭೀಮಾ ನಾಯಕ ವಿರುದ್ಧ ರಾಘವೇಂದ್ರ ಹಿಟ್ನಾಳ್ ಅಖಾಡಕ್ಕೆ ಇಳಿದಿದ್ದರು. ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾ ನಾಯ್ಕ್ ಸಹ ಸಿಎಂ ಸಿದ್ದರಾಮಯ್ಯ ಆಪ್ತ ಎನ್ನಲಾಗಿದೆ. ಕಳೆದ ವಾರವಷ್ಟೇ ನಡೆದಿದ್ದ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಲಾಗಿತ್ತು.
ರಾಘವೇಂದ್ರ ಹಿಟ್ನಾಳ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಭಿಮಾ ನಾಯಕ್ ಪ್ರಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಭೀಮನಾಯಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್ ಫೈಟ್ ಮಾಡಿದ್ದಾರೆ. ಹಾಗಾಗಿ ರಾಘವೇಂದ್ರ ಹಿಟ್ನಾಳ್ ಅವರಿಗೆ ಇದೀಗ ಬಹುತೇಕ ಗೆಲವು ಸಿಕ್ಕಂತಾಗಿದೆ ಒಕ್ಕೂಟಕ್ಕೆ ನಾಮನಿರ್ದೇಶನ ಆಗುವ ಮೂಲಕ ಭೀಮ ನಾಯಕರಿಗೆ ರಾಘವೇಂದ್ರ ಹಿಟ್ನಾಳ್ ಈ ಮೂಲಕ ಟಾಂಗ ನೀಡಿದ್ದಾರೆ.