ಮೈಸೂರು : ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದು, ಮುಸ್ಲಿಂ ವಿದ್ಯಾವಂತರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ ಇದು ಬಹಳ ಅಪಾಯಕಾರಿ ಮುಸ್ಲಿಮರ ಸಮಸ್ಯೆ ಬಡತನ ಅಲ್ಲ ಅವರ ಒಳಗಿನ ಧರ್ಮಂದತೆ ಹಾಗೂ ಅವರ ಮನಸ್ಥಿತಿಯ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರಲ್ಲಿ ಮಾತನಾಡಿದ ಅವರು, ಪುರುಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನು ಹೇಗೆ ಪತ್ತೆಹಚ್ಚುವುದು? ಹಿಂದೂ ರಾಷ್ಟ್ರ ಆಗಲು ಬಿಡಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ದೇಶವನ್ನು ಮುಸ್ಲಿಂ ರಾಷ್ಟ್ರ ಏನಾದರೂ ಮಾಡುತ್ತಾರ? ಇಂತಹ ನಾಯಕರು ಇರುವವರೆಗೂ ಈ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಮೈಸೂರಿನಲ್ಲಿ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ








