ಬೆಂಗಳೂರು : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಆರೋಗ್ಯ ಇಲಾಖೆಯಿಂದ ಸ್ಫೋಟಕ ಸಂಗತಿ ಹೊರಬಿದ್ದಿದೆ. ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಆತ್ಮಹತ್ಯೆ ಆಲೋಚನೆ ಬರುತ್ತಿವೆ. ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದೆ.
ಈ ಕುರಿತು ಡಾಕ್ಟರ್ ಗುರುರಾಜ ಹೆಗಡೆ ಮಾಹಿತಿ ನೀಡಿದ್ದು , ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಹಿಡನ್ ಡಿಪ್ರೆಶನ್ ಪ್ರಕರಣ. ನೀವು ನಿಮಾನ್ಸ್ ನ ಟೆಲಿ ಮಾನಸ್ ವೆ ಜನರು ಸುಮಾರು 2 ಲಕ್ಷ 3 ಸಾವಿರಕ್ಕೂ ಹೆಚ್ಚು ಜನರು ಕರೆ ಮಾಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಮನೋರೋಗಿಗಳು ಹೇಳಿಕೊಳ್ಳುತ್ತಿದ್ದಾರೆ. ಶೇಕಡಾ 49.86 ಪುರುಷರು ಶೇಕಡ 45.45 ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.
ಒಂದು ಕಡೆ ಉದ್ಯಮದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಚಿಂತೆ, ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಹಿಡನ್ ಡಿಪ್ರೆಶನ್ ನಿಂದ ಪುರುಷ ಮತ್ತು ಮಹಿಳೆಯರು ಬಳಲುತ್ತಿದ್ದಾರೆ. ತಮಗೆ ಅರಿವಿಲ್ಲದಂತೆ ಖಿನ್ನತೆಗೆ ಜನರು ಒಳಗಾಗುತ್ತಿದ್ದಾರೆ , ನಿಮಾನ್ಸ್ ನ 14416 ನಂಬರ್ಗೆ ಮನೋರೋಗಿಗಳು ನಿರಂತರವಾಗಿ ಕರೆ ಮಾಡುತ್ತಿದ್ದಾರೆ ಎಂದು ಡಾ. ಗುರುರಾಜ್ ಹೆಗಡೆ ಮಾಹಿತಿ ನೀಡಿದ್ದಾರೆ.








