ಕೊಪ್ಪಳ : ಪ್ರೀತಿಸಿಮದುವೆಯಾಗಬೇಕಿದ್ದ ಪ್ರೇಮಿಗಳು ತುಂಗಭದ್ರಾ ಎಡೆದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೊಪ್ಪಳದ ಮುನಿರಾಬಾದ್ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈ ಒಂದು ಘಟನೆ ನಡೆದಿದೆ. ಪ್ರೀತಿಗೆ ಕುಟುಂಬಸ್ಥರು ವಿರೋಧ ಆಗಿದ್ದಾರೆ. ನಿನ್ನೆ ಸಂಜೆ ಪ್ರವೀಣ್ ಮತ್ತು ಅಂಜಲಿ ಎನ್ನುವ ಪ್ರೇಮಿಗಳು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದು ಒಂದು ವರ್ಷದಿಂದ ಪ್ರವೀಣ್ ಮತ್ತು ಅಂಜಲಿ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಮನೆಯಲ್ಲಿ ತಿಳಿಸಿದ್ದಾರೆ.ಮನೆಯವರು ಕೂಡ ಮದುವೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾರೆ. ನಿನ್ನೆ ಈ ಇಬ್ಬರು ಕಾಲುವೆಗೆ ಬಂದಿದ್ದು, ಮನೆಯವರು ಏನಾದರೂ ಮಾಡಿ ಬಿಡುತ್ತಾರೆ ಎನ್ನುವ ಭಯದಿಂದ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲುವೆಗೆ ಹಾರೋದನ್ನ ಕೆಲರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.