ಬೆಂಗಳೂರು : ಕೋರ್ಟಿಗೆ ಬಂದು ಸಾಕ್ಷಿ ಹೇಳುತ್ತಾಳೆ ಎಂದು ಪತ್ನಿಗೆ ಪತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ. ಪತ್ನಿ ಚಿನ್ನದ ಅಂಗಡಿಗೆ ಬಂದಾಗ ಪತ್ನಿಯ ಮೇಲೆ ಪತಿಯೊಬ್ಬ ಚಾಕುವಿನಿಂದ ಇರದಿದ್ದಾನೆ. 38 ವರ್ಷದ ಜಮುನಾ ಕುತ್ತಿಗೆಗೆ ಪಾಪಿ ಪತಿ ಗುರುಮೂರ್ತಿ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿಂದ ನಡೆದಿದೆ.
11 ವರ್ಷದ ಕಲಹಕ್ಕೆ ಸಾಕ್ಷಿ ಹೇಳುತ್ತಾಳೆ ಅಂತ ಹಲ್ಲೆ ಮಾಡಿದ್ದಾನೆ. ಬೆಂಗಳೂರಿನ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಪತಿ ಗುರುಮೂರ್ತಿ ಅಟ್ಟಹಾಸ ಮೆರೆದಿದ್ದಾನೆ. ಮೂರು ದಿನಗಳ ಹಿಂದೆ ಪತ್ನಿ ಜಮುನಾ ಕಾಲು ಚೈನು ಖರೀದಿಗೆ ಚಿನ್ನದ ಅಂಗಡಿಗೆ ಬಂದಿದ್ದಳು ಈ ವೇಳೆ ಪತ್ನಿಯ ಹುಡುಕಿಕೊಂಡು ಪತಿ ಗುರುಮೂರ್ತಿ ಬಂದಿದ್ದ. ಜಮುನಾ ಚಲನವಲನ ಗಮನಿಸಿ ಪ್ಲಾನ್ ಮಾಡಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಕಳೆದ 11 ವರ್ಷಗಳಿಂದ ಜಮುನಾ ಮತ್ತು ಗುರುಮೂರ್ತಿ ಬೇರೆಯಾಗಿದ್ದರು. ಈ ಹಿಂದೆಯು ಕೂಡ ಪತ್ನಿಗೆ ಚಾಕುವಿನಿಂದ ಗುರುಮೂರ್ತಿ ಇರಿದಿದ್ದ. ಜಮುನಾಳನ್ನು ಕೊಲೆ ಮಾಡೋಕೆ ಪತಿ ಗುರುಮೂರ್ತಿ ಮುಂದಾಗಿದ್ದ. 307 ಕೇಸ್ ದಾಖಲಿಸಿ ಪತಿಯಿಂದ ಜಮುನಾ ದೂರವಿದ್ದಳು. ಇದೇ ಕೇಸ್ ಸಂಬಂಧ ಜುಲೈ 14 ರಂದು ವಿಚಾರಣೆ ಇತ್ತು. ನನ್ನ ವಿರುದ್ಧ ಸಾಕ್ಷಿ ಹೇಳಬೇಡ ಅಂತ ಪತ್ನಿ ಜಮುನಾ ಗೆ ಬೆದರಿಕೆ ಹಾಕಿದ್ದ.ಸದ್ಯ ತಲೆಮರೆ ಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.