ಬಾಗಲಕೋಟೆ : ಬೃಹತ್ ಬನ್ನಿ ಮರವನ್ನು ಹತ್ತುವ ಮಳಿಯಪ್ಪಜ್ಜ.. ಹ್ಯೂತ್ ಎಂದು ಕೂಗಿದ್ದಾರೆ. ಆಗ ಅಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಭಕ್ತರು ನಿಶಬ್ದರಾಗಿದ್ದಾರೆ. ಬಳಿಕ ಮುಂಗಾರಿ – ಹಿಂಗಾರಿ ತಕ್ಕಸ್ಟ ಮಸನ ಎಂದು ಹೇಳಿದ್ದಾರೆ. ಅಂದರೆ ಪ್ರಸ್ತುತ ಸಾಲಿನಲ್ಲಿ ಚೆನ್ನಾಗಿ ಮಳೆ ಬೆಳೆ ಇದೆ ಎಂದು ಅಲ್ಲಿನವರು ಅರ್ಥೈಸಿದ್ದಾರೆ.
ಈ ಒಂದು ಭವಿಷ್ಯ ಹೇಳುವ ಪದ್ಧತಿ ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದಲ್ಲಿದೆ. ಇಲ್ಲಿನ ಹುಲ್ಲೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಈ ವಿಶೇಷ ಆಚರಣೆ ಗಮನ ಸೆಳೆಯುವಂತಿದೆ.ಆಗಿ ಹುಣ್ಣಿಮೆ ದಿನದಂದು ರಾತ್ರಿ ಸಮಯದಲ್ಲಿ ದೇವಾಲಯದಲ್ಲಿ ಡೊಳ್ಳು ಭಾರಿಸುವ ಮೂಲಕ ಮಳಿಯಪ್ಪ ಅಜ್ಜ ಎಂಬುವ ಪೂಜಾರಿಗೆ ಮೈಯಲ್ಲಿ ದೇವರು ಬರುತ್ತದೆ. ಅವರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಬನ್ನಿ ಮರಕ್ಕೆ ಪಲ್ಲಕ್ಕಿ ಮೆರವಣಿಗೆ ಹೋಗುತ್ತಾರೆ.
ಮರದ ಪಕ್ಕದಲ್ಲಿಯೇ ಹಿಂದೆ ಲಿಂಗೈಕ್ಯರಾಗಿರುವ ಹಿರಿಯರ ಸಮಾಧಿಗಳು ಇವೆ. ಇಲ್ಲಿ ಪೂಜೆ – ಪುನಸ್ಕಾರ ಸಲ್ಲಿಸಲಾಗುತ್ತದೆ. ನಂತರ ಹಿಂದಿನ ಮಳಿಯಪ್ಪ ಪೂಜಾರಿಗಳ ವಂಶಸ್ಥರ ಸಮಾಧಿಯಿಂದ ಈಗಿನ ಮಳಿಯಪ್ಪ ಅಜ್ಜ ಅವರಿಗೆ ಸಂದೇಶ ನೀಡುತ್ತಾರೆ ಎಂಬ ನಂಬಿಕೆ ಇದೆ.
ಸಮಾಧಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಬೃಹತ್ ಬನ್ನಿ ಮರವನ್ನು ಹತ್ತುವ ಮಳಿಯಪ್ಪಜ್ಜ.. ಹ್ಯೂತ್ ಎಂದು ಕೂಗಿದ್ದಾರೆ. ಆಗ ಅಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಭಕ್ತರು ನಿಶಬ್ದರಾಗಿದ್ದಾರೆ. ಬಳಿಕ ಮುಂಗಾರಿ – ಹಿಂಗಾರಿ ತಕ್ಕಸ್ಟ ಮಸನ ಎಂದು ಹೇಳಿದ್ದಾರೆ. ಅಂದರೆ ಪ್ರಸ್ತುತ ಸಾಲಿನಲ್ಲಿ ಚೆನ್ನಾಗಿ ಮಳೆ ಬೆಳೆ ಇದೆ ಎಂದು ಅಲ್ಲಿನವರು ಅರ್ಥೈಸಿದ್ದಾರೆ.