ಬೆಂಗಳೂರು : ನಮ್ಮ ಕುಟುಂಬ ಮುಗಿಸೋಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಡಿಕೆಶಿ ನೀವು ಮುಂದೆ ಜೈಲಿಗೆ ಹೋಗುವ ದಿನ ಬರುತ್ತದೆ. ನೀವು ಯಾವ ರೀತಿ ಆಟ ಆಡುತ್ತಿದ್ದೀರಿ ನನಗೆ ಗೊತ್ತಿದೆ. ಎಲ್ಲದಕ್ಕೂ ದೇವರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯಲ್ಲಿ ಸರ್ಕಾರದಿಂದ ಮಾಡಲು ಉದ್ದೇಶಿಸಿರುವ ಇಂಟಿಗ್ರೇಟೆಡ್ ಟೌನ್ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ವರ್ಚುವಲ್ ಲೈವ್ ಮೂಲಕ ಮಾತನಾಡಿದ ಹೆಚ್ಡಿಕೆ, ನಾನು ಬದುಕಿರುವವರೆಗೂ ರೈತರ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬಿಡೋದಿಲ್ಲ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಜೈಲಿಗೆ ಹೋಗೋ ಕಾಲ ಕೂಡ ಸನ್ನಿಹಿತವಾಗಿದ್ದು, ರೈತರ ಜೊತೆ ನಾನು ನಿಲ್ಲುತ್ತೇನೆ. ಅನಿವಾರ್ಯವಾದರೆ ನಾನೇ ಬರುತ್ತೇನೆ ಎಂದರು.
ಕಳೆದ ಹಲವು ದಿನಗಳಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯಲ್ಲಿ ಸರ್ಕಾರದಿಂದ ಮಾಡಲು ಉದ್ದೇಶಿಸಿರುವ ಇಂಟಿಗ್ರೇಟೆಡ್ ಟೌನ್ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿದ ಅವರು, ನಿಮ್ಮ ಪರವಾಗಿ ಧ್ವನಿ ಎತ್ತಲು ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಪಾದಯಾತ್ರೆ ಅನಿವಾರ್ಯವಾದ್ರೆ ನಾನೇ ಬರುತ್ತೇನೆ. ರೈತರ ಜೊತೆ ನಾವು ನಿಲ್ಲುತ್ತೇವೆ. ಇದು ರಾಜಕೀಯ ಪ್ರಶ್ನೆ ಅಲ್ಲ, ಜನರ ಬದುಕಿನ ಪ್ರಶ್ನೆಯಾಗಿದೆ ಎಂದರು.
ಅಭಿವೃದ್ಧಿ ಹೆಸರಲ್ಲಿ ರೈತರ ಜಮೀನು ಲೂಟಿ ಮಾಡಲು ನಾನು ಎಂದಿಗೂ ಬಿಡೋದಿಲ್ಲ. ನಿಮ್ಮ ಹೋರಾಟಕ್ಕೆ ನಾನು ಜೊತೆಯಲ್ಲಿ ಇರುತ್ತೇನೆ. ಅಧಿಕಾರಿಗಳು, ಪೊಲೀಸರು ರೈತರನ್ನು ದಬ್ಬಾಳಿಕೆ ಮಾಡಿ ಸರ್ವೇ ಕಾರ್ಯ ನಡೆಸಿದರೆ ಮುಂದೆ ಪ್ರಾಯಶ್ಚಿತ ಪಡಬೇಕಾಗುತ್ತದೆ. ರೈತರಿಗೆ ಏನಾದರೂ ತೊಂದ್ರೆ ಕೊಟ್ಟರೆ ನಾನು ಬರಬೇಕಾಗುತ್ತದೆ ಹುಷಾರ್. ಮುಂದೆ ಏನಾಗುತ್ತೆ ಅಂತ ಕಾದುನೋಡಿ ಎಂದು ಎಚ್ಚರಿಸಿದ್ದಾರೆ.