ಬೆಂಗಳೂರು : ರಾಜ್ಯದಲ್ಲಿ ಸರಣಿ ಹೃದಯಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಖರ ಕಾರಣ ತಿಳಿದುಕೊಳ್ಳಲು ಇತ್ತೀಚಿಗೆ ರಾಜ್ಯ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ 10 ತಜ್ಞರ ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಇದೀಗ ವರದಿ ಸಲ್ಲಿಸಲಿದೆ. ಹೃದಯಾಘಾತದ ಸಾವು ನಿಯಂತ್ರಣಕ್ಕೆ ತಜ್ಞರು ಸಲಹೆ ನೀಡಿದ್ದು,ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೌದು ಕೋವಿಡ್ ಬಂದು ಹೋದವರಲ್ಲಿ ಕೊಂಚ ಹೃದಯ ಸಮಸ್ಯೆ ಇದೆ. ಜನರಲ್ಲಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಾಗಿಲ್ಲ. ಕೋವಿಡ್ ವೈರಸ್ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಮಾಡಿದೆ. ವರದಿಯಲ್ಲಿ ಹಾರ್ಟ್ ಕಾರ್ಯಕ್ಷಮತೆ ಕಡಿಮೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ ಕೋವಿಡ್ ಬಂದು ಹೋದ ಮೂರು ವರ್ಷದ ಬಳಿಕ ಸಮಸ್ಯೆ ಆಗಿದೆ. ಕೋವಿಡ್ ಬಂದು ಹೋದವರಲ್ಲಿ ಹೃದಯ ಸಮಸ್ಯೆ ಕಾಣುತ್ತಿದೆ. ನಿದ್ರಾ ಹೀನತೆ, ಸುಸ್ತು, ಉಸಿರಾಟದ ಸಮಸ್ಯೆ ಹೆಚ್ಚಾದ ಬೊಜ್ಜು, ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆ ಉಲ್ಲೇಖನಾಗಿದೆ.
ಇನ್ನು 15 ವರ್ಷಗಳಗಿನ ಶಾಲಾ ಮಕ್ಕಳಿಗೆ ಸ್ಕ್ರೀನಿಂಗ್ ಮಾಡಬೇಕು. ಎಲ್ಲಾ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಬೇಕು. ಪಠ್ಯಕ್ರಮದಲ್ಲಿ ಹೃದಯಾಘಾತ ಅಳವಡಿಸಲು ತಜ್ಞರ ಸಲಹೆ ನೀಡಿದ್ದಾರೆ. ಸಾರ್ವಜನಿಕ ಧೂಮಪಾನ ಕಡ್ಡಾಯ ನಿಷೇಧಕ್ಕೆ ಸಲಹೆ ನೀಡಿದ್ದು, ಹೃದಯಾಘಾತ ಸಮಸ್ಯೆಯ ಬಗ್ಗೆ ರಿಜಿಸ್ಟರ್ ಶುರು ಮಾಡಬೇಕು. ಹೃದಯಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಬೇಕು ಜಿಲ್ಲಾ ಅಸ್ಪತ್ರೆಗಳಲ್ಲಿ ಹೃದಯ ಥಿನ್ನರ್ ಟ್ಯಾಬ್ಲೆಟ್ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.