ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಮಿಷನ್ ಬಾಂಬ್ ನಡೆಸಿದ್ದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘವು ಇದೀಗ ಸಿಡಿದೆದ್ದಿದೆ. ಸರ್ಕಾರದಲ್ಲಿ ಇದೀಗ ಕಮಿಷನ್ ಜಾಸ್ತಿ ಆಗಿದೆ ಎಂದು ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಗಂಭೀರವಾದ ಆರೋಪ ಮಾಡಿದ್ದಾರೆ 60% 80% ಅಂತ ಹೇಳಿಲ್ಲ ಒಟ್ನಲ್ಲಿ ಇದೀಗ ಸರ್ಕಾರದಲ್ಲಿ ಕಮಿಷನ್ ಹೆಚ್ಚಳ ಆಗಿದೆ.
ಸರ್ಕಾರದಿಂದ ಗುತ್ತಿಗೆದಾರರಿಗೆ ಒಟ್ಟು 33,000 ಕೋಟಿ ಹಣ ಬರಬೇಕಿದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪ ಮಾಡಿದ್ದು ಸರ್ಕಾರದ ವಿರುದ್ಧ ಕಮಿಷನ್ ಬಾಂಬ್ ಸಿಡಿಸಿದ್ದಾರೆ. ಸರ್ಕಾರ ಬಂದ ಮೇಲೆ ಬಾಕಿ ಹಣ ಬಿಡುಗಡೆ ಮಾಡುತ್ತಿವೆ ಅಂತ ಹೇಳಿದರು. ಎಲ್ಲೋಸೆ ರಿಲೀಸ್ ಗೆ ಕಮಿಷನ್ ತಗೋತೀರಾ ಅಂತ ಹೇಳಿದ್ದೇವೆ ಹೊರತು 60% 80% ಕಮಿಷನ್ ತಗೋತಿದ್ದಾರೆ ಅಂತ ಹೇಳಿಲ್ಲ ಆತರ ಹೇಳಿಲ್ಲ ಎಂದು ಮಂಜುನಾಥ್ ಹೇಳಿದರು.
ದೀಪಾವಳಿ ಹಬ್ಬದ ನಂತರ ನಾವು ಹೋರಾಟ ಶುರು ಮಾಡುತ್ತೇವೆ ಮುಷ್ಕರ ನಡೆಸಿ ದೊಡ್ಡದಾಗಿ ಹೋರಾಟ ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಕಾಮಗಾರಿ ನಿಲ್ಲಿಸಿ ಎಲ್ಲಾ ಸ್ಥಗಿತ ಮಾಡಿ ಪ್ರೊಟೆಸ್ಟ್ ಮಾಡುತ್ತೇವೆ ನಮಗೆಲ್ಲ ಮಾರಕವಾಗಿದ್ದು ಹಲವು ಇಲಾಖೆಗಳಲ್ಲಿ ಈ ರೀತಿ ಪ್ಯಾಕೇಜ್ ಟೆಂಡರ್ ಇದೆ. ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಸ್ಟೀಮ್ ಬಂದಿದೆ ಸಣ್ಣ ಗುತ್ತಿಗೆದಾರರ ಪತ್ನಿಯರು ಮಕ್ಕಳು ನಮಗೆ ಕರೆ ಮಾಡಿ ಕೇಳುತ್ತಿದ್ದಾರೆ ಎಂದರು.