ಬೆಂಗಳೂರು : ತನ್ನ ಸಹ ಕಲಾವಿದಯ ಮೇಲೆ ಅತ್ಯಾಚಾರ ಎಸಗಿದ್ದು ಅಲ್ಲದೆ, ಎರಡು ಬಾರಿ ಗರ್ಭಪಾತ ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಕಿರುತೆರೆ ನಟ ಮಡೆನೂರು ಮನು ವಿರುದ್ಧ ಇದೀಗ ಅತ್ಯಾಚಾರ ಸಂತ್ರಸ್ತೇ ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಮಡೆನೂರು ಮನು ವಿರುದ್ದ ಪ್ರಕರಣವನ್ನು ನಾನು ಹಿಂಪಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಡೆನೂರು ಮನು ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯುವುದಿಲ್ಲ. ನನ್ನ ಬಳಿ ಸಾಕಷ್ಟು ಸಾಕ್ಷಾಧಾರವಿದೆ. ಎಲ್ಲಾ ಸಾಕ್ಷಿಗಳನ್ನು ರಿಲೀಸ್ ಮಾಡುತ್ತೇನೆ. ಹಂತವಾಗಿ ಸಾಕ್ಷಿಗಳನ್ನು ರಿಲೀಸ್ ಮಾಡುತ್ತೇನೆ ಎಂದು ಅತ್ಯಾಚಾರ ಸಂತ್ರಸ್ತೆ ತಿಳಿಸಿದರು.
ಇದರಲ್ಲಿ ಅಪ್ಪಣ್ಣದು ಯಾವುದೇ ತಪ್ಪಿಲ್ಲ. ಬಲವಂತವಾಗಿ ನನ್ನ ಕೈಯಲ್ಲಿ ವಿಡಿಯೋ ಮಾಡಿಸಿಕೊಂಡಿದ್ದಾರೆ. ನನ್ನ ಖಾಸಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಸಿನಿಮಾ ಮಾಡಿದ ನಂತರ ನಮ್ಮಿಬ್ಬರ ನಡುವೆ ಗಲಾಟೆ ಆಯಿತು. ಹೆಂಡತಿಯಿಂದಲೇ ಮಡೆನೂರು ಮನು ಹಾಳಾಗಿರೋದು. ಆಕೆಯ ಗಂಡ ಮಾಡಿರುವುದು ಮನೆಹಾಳು ಕೆಲಸ ಅವರು ಮನೆಯಲ್ಲಿ ಬೆಚ್ಚಗಿದ್ದಾರೆ ನಾನು ಮಾತ್ರ ಬೀದಿಗೆ ಬಿದ್ದಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.