ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಕೊಲೆ, ದರೋಡೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಹಳಿ ಬಳಿ ಸೂಟ್ಕೇಸ್ ಅಲ್ಲಿ ಬಾಲಕಿಯ ರುಂಡ ಮತ್ತು ಮುಂಡ ಬೇರ್ಪಡಿಸಿರುವ ಮೃತದೇಹ ಪತ್ತೆಯಾಗಿದೆ.
ಹೌದು ಬಾಲಕಿಯ ಶವವೊಂದು ರುಂಡ – ಮುಂಡ ಕತ್ತರಿಸಿದ ಸ್ಥಿತಿಯಲ್ಲಿ, ಮುಚ್ಚಿದ ನೀಲಿ ಸೂಟ್ ಕೇಸ್ವೊಂದರಲ್ಲಿ ಪತ್ತೆಯಾದ ಆತಂಕಕಾರಿ ಘಟನೆ ಹಳೆ ಚಂದಾಪುರ ರೈಲ್ವೇ ಹಳಿ ಬಳಿ ನಡೆದಿದೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ಮಾಹಿತಿ ತಿಳಿದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರು ಹಾಗೂ ಬಯ್ಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.