ಶ್ರೀನಗರ : ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶೂಕಲ್ ಕೆಲ್ಲರ್ ಮೇಲೆ ಮಂಗಳವಾರ (ಮೇ 13) ಭಾರತೀಯ ಸೇನೆ ಭಯೋತ್ಪಾದಕರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿತು. ಈ ಆಪರೇಷನ್ ಕಿಲ್ಲರ್ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಶಹೀದ್ ಕುಟ್ಟಾಯ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ರಾಷ್ಟ್ರೀಯ ರೈಫಲ್ಸ್ ಘಟಕವು ಒದಗಿಸಿದ ಗುಪ್ತಚರ ವರದಿಯ ಮೇರೆಗೆ ಬೆಳಿಗ್ಗೆ ಭಾರತೀಯ ಸೇನೆ ಮತ್ತು ಸ್ಥಳೀಯ ಭದ್ರತಾ ಪಡೆಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪರಿಸ್ಥಿತಿ ಶೀಘ್ರವಾಗಿ ಉಲ್ಬಣಗೊಂಡಿತು ಮತ್ತು ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯಿತು. ಇದರ ಪರಿಣಾಮವಾಗಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದರು.
ಹತ್ಯೆಗೀಡಾದ ಭಯೋತ್ಪಾದಕರನ್ನು ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಲಷ್ಕರ್-ಎ-ತೋಯ್ಬಾ/ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕಾರ್ಯಕರ್ತರಾಗಿದ್ದು, ಮೂರನೇ ಭಯೋತ್ಪಾದಕನ ಗುರುತನ್ನು ಖಚಿತಪಡಿಸಲಾಗುತ್ತಿದೆ. ಶಾಹೀನ್ ಕಾಶ್ಮೀರದಲ್ಲಿ ಟಿಆರ್‌ಎಫ್‌ನ ಕಾರ್ಯಾಚರಣೆಯ ಕಮಾಂಡರ್ ಆಗಿದ್ದರು.