ಬೆಳಗಾವಿ : ಗುರುವಾರ ಬೆಳಗಾವಿ ಜಿಲ್ಲೆಯಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಶಾರುಕ್ ಪೆಂಡಾರಿ (30), ಇಕ್ಬಾಲ್ ಜಮಾದಾರ್ (50), ಸಾನಿಯಾ ಲಂಗೋಟಿ (37), ಉಮ್ರಾ ಬೇಗಂ ಲಂಗೋಟಿ (17), ಶಬನಂ ಲಂಗೋಟಿ (37) ಮತ್ತು ಫರಾನ್ ಲಂಗೋಟಿ (13) ಎಂದು ಗುರುತಿಸಲಾಗಿದೆ.
5 ಗ್ಯಾರಂಟಿ ಯೋಜನೆ ಜಾರಿಯಿಂದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ- ಸಚಿವ ಮಧು ಬಂಗಾರಪ್ಪ
ಅಪಘಾತದಲ್ಲಿ ಇತರ ನಾಲ್ವರು – ಫರತ್ ಬೆಟಗೇರಿ, (18), ಸೋಫಿಯಾ ಲಂಗೋಟಿ, (22), ಸಾನಿಯಾ ಇಕ್ಬಾಲ್ ಜಮಾದಾರ, (36), ಮತ್ತು ಮಾಹಿನ್ ಲಂಗೋಟಿ, (7) – ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ನೋಂದಣಿ ಸಂಖ್ಯೆಯನ್ನು ಹೊಂದಿರುವ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಂತ್ರಸ್ತರು ಪ್ರಯಾಣಿಸುತ್ತಿದ್ದರು.
ಸದನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಪರ ವಕಾಲತ್ತು- ಸಿಎಂ ಸಿದ್ದರಾಮಯ್ಯ ತಿರುಗೇಟು
ಕರ್ನಾಟಕ-ಮಹಾರಾಷ್ಟ್ರ ಗಡಿ ಸಮೀಪದ ಕಿತ್ತೂರಿನಿಂದ ಗುಲ್ಲಳ್ಳಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆಂದು ಕಾರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾರುಕ್ ಪೆಂಡಾರಿ ಕಾರನ್ನು ಓಡಿಸುತ್ತಿದ್ದರು ಮತ್ತು ಪ್ರಾಥಮಿಕವಾಗಿ ಅವರು ವೇಗವಾಗಿ ಓಡಿಸುತ್ತಿದ್ದರು ಎಂದು ತೋರುತ್ತದೆ. ಕಾರು ಕೂಡ ಓವರ್‌ಲೋಡ್ ಆಗಿತ್ತು. ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಈ ಸಂಬಂಧ ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.