ಬೆಂಗಳೂರು : ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಅಲ್ಲಿ ಈ ಒಂದು ಪ್ರಕರಣದ ವಿಚಾರಣೆ ನಡೆಯಿತು.
ಆದಾಯ ಬಹಿರಂಗಪಡಿಸಿದರೆ ಸಾಕೆ? ವ್ಯವಹಾರವನ್ನು ಬಹಿರಂಗಪಡಿಸಬೇಕೇ? ಈ ಬಗ್ಗೆ ವಿಚಾರಣೆ ಅಗತ್ಯ ಬಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. 6 ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಸಿಮುನಿರಾಜುಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಎಸ್ ಎನ್ ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ ನೀಡಿದ ಸುಪ್ರೀಂಕೋರ್ಟ್. ಸೆಪ್ಟೆಂಬರ್ ತಿಂಗಳಿಗೆ ವಿಚಾರಣೆಯನ್ನು ಇದೆ ವೇಳೆ ಸುಪ್ರೀಂ ಕೋರ್ಟ್ ಮುಂದೂಡಿತು.








