ಕೋಲ್ಕತ್ತಾ : ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ದಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಸದ್ಯ ಗಿಲ್ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಗಾಯಗೊಂಡಿದ್ದರು.
ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಶುಭಮನ್ ಗಿಲ್ ಗಾಯಗೊಂಡಿದ್ದರು. ಕುತ್ತಿಗೆ ನೋವಿನಿಂದ ಬ್ಯಾಟಿಂಗ್ ಮಾಡದೆ ಅರ್ಧಕ್ಕೆ ತೆರಳಿದ್ದರು. ಇದೀಗ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಶುಭಮನ್ ಗಿಲ್ ಐಸಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನವೆಂಬರ್ 22 ರಿಂದ 26 ರವರೆಗೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ನಾಯಕ ಶುಭಮನ್ ಗಿಲ್ ಆಡುವುದು ಅನುಮಾನವಾಗಿದೆ.
ಎರಡನೇ ದಿನದಾಟದ ಬೆಳಗಿನ ಅವಧಿಯಲ್ಲಿ ಮೂರು ಎಸೆತಗಳಲ್ಲಿ 4 ರನ್ ಗಳಿಸಿ ಡಗೌಟ್‌ಗೆ ಮರಳಲು ನಿರ್ಧರಿಸಿದ ಗಿಲ್, ಶನಿವಾರ ತೀವ್ರ ಕುತ್ತಿಗೆ ನೋವನ್ನು ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನಿಗಾದಲ್ಲಿ ಇರಿಸಲಾಗಿತ್ತು ಮತ್ತು ರೆವ್‌ಸ್ಪೋರ್ಟ್ಸ್ ಪ್ರಕಾರ, ಗಿಲ್ ಅವರನ್ನು ರಾತ್ರಿಯಿಡೀ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.ಲಭ್ಯವಿರುವ ಮಾಹಿತಿಯ ಪ್ರಕಾರ, ಗಿಲ್ ಫಿಟ್ ಆಗಲು ಕೆಲವು ದಿನಗಳು ಬೇಕಾಗುತ್ತದೆ, ಮತ್ತು ಆ ಕಾರಣದಿಂದಾಗಿ, ಅವರು ಎರಡನೇ ಟೆಸ್ಟ್‌ನಲ್ಲಿ ಭಾಗವಹಿಸದಿರಬಹುದು.








