ಬಾಗಲಕೋಟೆ : ಶಿಕ್ಷಣ ಇಲಾಖೆಯಲ್ಲಿ CRP ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಷಣೆ ಎಸೆಗಿದ ಆರೋಪದ ಅಡಿ ಇದೀಗ ಬಾಗಲಕೋಟೆಯಲ್ಲಿ ಶಿಕ್ಷಕ ಮುತ್ತು ಮುಳ್ಳಾ ಎನ್ನುವವನನ್ನು ಅರೆಸ್ಟ್ ಮಾಡಲಾಗಿದೆ.
ಹೌದು ಬಾಗಲಕೋಟೆಯ ವಿದ್ಯಗಿರಿ ನಿವಾಸಿಯಾಗಿರುವ ಮುತ್ತು ಮುಳ್ಳ ಎನ್ನುವ ಶಿಕ್ಷಕನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಅಡಿ ಕೇಸ್ ದಾಖಲಾಗಿತ್ತು. ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಿಕ್ಷಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಶಿಕ್ಷಣ ಇಲಾಖೆಯಲ್ಲಿ ಸಿಆರ್ಪಿ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.