ಬೆಂಗಳೂರು : ಬೆಂಗಳೂರಿನಲ್ಲಿ ಟಿಡಿಆರ್ ಹಗರಣ ಸಂಬಂಧಪಟ್ಟ ED ಅಧಿಕಾರಿಗಳು ಇದೀಗ ದಾಳಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ನಿಬಂಧನೆ ಅಡಿ ಇದೀಗ ಜಾರಿ ನಿರ್ದೇಶನಲಯ ಅಧಿಕಾರಿಗಳು(ED) ದಾಳಿ ಮಾಡಿದ್ದಾರೆ. ಮೆಸರ್ಸ್ ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಕಂಪನಿ ನಿರ್ದೇಶಕರ ಮನೆ ಸೇರಿದಂತೆ 9 ಕಡೆ ಇಡಿ ದಾಳಿ ನಡೆಸಿ ಇದೀಗ ಶೋಧ ನಡೆಸುತ್ತಿದೆ. ದಾಳಿಯ ವೇಳೆ ಹಲವು ದಾಖಲೆಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಡಿಆರ್ ಹಗರಣದ ಬಗ್ಗೆ ಜೆಸಿಬಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೀಗ ಇಡಿ ಅಧಿಕಾರಿಗಳು ಮತ್ತೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ED, Bengaluru has conducted search operations at 9 premises including the office of M/s Valmark Realty Holdings Private Limited, its Director and others under the provisions of PMLA, 2002 in connection with a scam involving fraudulent issuance of TDRs. During the search…
— ED (@dir_ed) May 23, 2025