ಬೆಂಗಳೂರು : ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಾಂಬ್ ಸ್ಫೋಟ ಪ್ರಕರಣ ಇನ್ನು ಹಸಿರಾಗಿರುವಾಗಲೇ ಕೆಫೆಯ ಮತ್ತೊಂದು ಬ್ರಾಂಚ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು ಎಂದು ರಾಮೇಶ್ವರಂ ಕೆಫೆ ಮಾಲೀಕ ಹಾಗೂ ಸಿಇಒ ರಾಘವೇಂದ್ರ ರಾವ್ ಹೇಳಿದ್ದಾರೆ.
BREAKING : ರಾಮನಗರದಲ್ಲಿ ‘ಅಕ್ರಮ ಮಣ್ಣು’ ಸಾಗಾಟ : ತಹಸೀಲ್ದಾರ್ ಮೇಲೆ ಲಾರಿ ಹರಿಸಲು ಯತ್ನ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿನ್ನೆ ಮೊನ್ನೆ ಹುಟ್ಟಿದ ಸಂಸ್ಥೆ ಅಲ್ಲ. 2012 ರಲ್ಲಿ ನಾಲ್ಕು ಜನ ಸೇರಿಕೊಂಡು ಕುಮಾರಪಾರ್ಕ್ ಬಳಿಯ ಪುಟ್ ಪಾತ್ ಮೇಲೆ ಆರಂಭಿಸಿದ್ದೆವು. ಅವತ್ತಿಂದಲೇ ನಮಗೆ ಕಷ್ಟಗಳು ಎದುರಾದವು, ಇದು ನಮಗೆ ಹೊಸದೇನಲ್ಲ. ರಾಮೇಶ್ವರಂ ಕೆಫೆಯ ಮತ್ತೊಂದು ಬ್ರಾಂಚ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ರಾಜ್ಯದ ಗ್ರಾಮೀಣ ಜನತೆಗೆ ಗುಡ್‌ನ್ಯೂಸ್: ಬೆರಳ ತುದಿಯಲ್ಲೇ ಈ ರೀತಿ ಅರ್ಜಿ ಸಲ್ಲಿಸಿ, ಸೇವೆ ಪಡೆಯಿರಿ!
ಇನ್ನು ಇತರೆ ಹೊಟೆಲ್ ಗಳ ಪೈಪೋಟಿಯಿಂದ ಈ ಕೃತ್ಯ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಅದು ಸಾಧ್ಯವಿಲ್ಲ.. ಹೊಟೇಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ನ ಹಾಕುವವರು ನಾವು ಇಂತಹ ಕೆಲಸ ಮಾಡಲ್ಲ ಎಂದರು. ಅಂತೆಯೇ ಪ್ರತಿ ಹಂತದಲ್ಲಿ ಹೊಡೆತ ಬಿದ್ದಿದೆ. ಶುಕ್ರವಾರ ನಡೆದ ಘಟನೆ ಸರಿಯಲ್ಲ. ಭಾರತೀಯರಾಗಿ ಇದನ್ನ ಖಂಡಿಸಬೇಕು. ಇದು ನಮಗೆಲ್ಲಾ ಮುನ್ನೆಚ್ಚರಿಕೆಯಾಗಿದ್ದು, ನಡೆದ ಘಟನೆಯನ್ನು ಎದುರಿಸಬೇಕಿದೆ ಎಂದರು.
ಭಾರತದ ಮೊದಲ ‘ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಯನ್ನು’ ಪರಿಚಯಿಸಿದ ಕೇಂದ್ರ ಸರ್ಕಾರ
ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ ಬ್ರಾಂಚ್ ಗೆ ಭೇಟಿ ನೀಡಿದ್ದ ಸಿಇಒ ರಾಘವೇಂದ್ರ ರಾವ್ ಅವರು, ಇಂದು ಸಂಜೆಯಿಂದ ರಾಮೇಶ್ವರಂ ಕೆಫೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ನಿನ್ನೆ ಘಟನೆ ಬಗ್ಗೆ ಎಲ್ಲರೂ ನನ್ನ ಜೊತೆಯಲ್ಲಿ ನಿಂತಿದ್ದು, ನಮ್ಮ ಸಂಸ್ಥೆಯ ಪರವಾಗಿ ಎಲ್ಲರಿಗೂ ವಂದನೆ ಹೇಳುತ್ತೇನೆ ಎಂದು ತಿಳಿಸಿದರು.
VIDEO | Here’s what founder and CEO Raghavendra Rao of Bengaluru’s Rameshwaram Cafe said on another forgotten ‘bag’ found at cafe's other branch.
“Thousands of people visit the cafe everyday. Some people might have forgotten and left by mistake. In such cases, we inform the… pic.twitter.com/zrvj8H5yef
— Press Trust of India (@PTI_News) March 2, 2024