ಬೆಂಗಳೂರು : ಬೆಂಗಳೂರಲ್ಲಿ ಜಾಮೀನು ಪಡೆದು ತಲೆಮರಿಸಿಕೊಂಡಿದ್ದ ಶಂಕಿತ ಉಗ್ರನನ್ನು ಇದೀಗ NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹರ್ಷದ್ ಖಾನ್ ನನ್ನು NIA ಅರೆಸ್ಟ್ ಮಾಡಿದೆ.
ಈ ಹಿಂದೆ ಅರ್ಷದ್ ಖಾನ್ ಅನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಗ್ರೀನೆಟ್ ಸಿಕ್ಕಿದ ಪ್ರಕರಣದಲ್ಲಿ ಹರ್ಷದ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು ಆತನ ಬಂಧನದ ಬಳಿಕ ಕೇಸ್ NIA ಗೆ ವರ್ಗಾವಣೆ ಮಾಡಲಾಗಿತ್ತು ಈ ವೇಳೆ ಜಾಮೀನು ಪಡೆದು ಅರ್ಷದ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದ.
ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ನ್ಯಾಯಾಲಯವು ವಾರಂಟ್ ಮತ್ತು ಪ್ರಕ್ಲೊಮೇಷನ್ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ವಿಧಿಗೆ ಬಂದಿಸಿದೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.








