ನವದೆಹಲಿ : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ ಎದುರಾಗಿತ್ತು. ಈ ವೇಳೆ ಅವರು ನಿರೀಕ್ಷಣಾ ಜಾಮೀನು ಕೋರಿ ಕೋಕಾ ಅರ್ಜಿ ಸಲ್ಲಿಸಿದ್ದರು.ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಏಪ್ರಿಲ್ 15ರಂದು ತೀರ್ಪು ಪ್ರಕಟಿಸಲಾಗುತ್ತೆ ಎಂದು ಆದೇಶ ಹೊರಡಿಸಿದೆ.
ಹೌದು ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧದ ಕೋಕಾ ಕೇಸ್ ಅರ್ಜಿ ವಿಚಾರಣೆ ನಡೆಯಿತು. ಎಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜಗೆ ಬಿಗ್ ರಿಲೀಫ್ ಸಿಕ್ಕಿದ್ದು ವಾದ ಪ್ರತಿವಾದ ಅಲಿಸಿ ಸುಪ್ರೀಂ ಕೋರ್ಟ್ ಇದೀಗ ತೀರ್ಪು ಮುಂದೂಡಿದೆ. ಏಪ್ರಿಲ್ 15ರವರೆಗೂ ನಿರೀಕ್ಷಣಾ ಜಾಮೀನು ಆದೇಶ ಮುಂದುವರಿಯಲಿದೆ.








