ಬೆಂಗಳೂರು : ಹಿಂಬದಿಯಿಂದ ಬಂದ ಬಿಕೆ ಒಂದು ಟಿಪ್ಪರ್ ಅನ್ನು ಓವರ್ ಟೇಕ್ ಮಾಡಲು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಒಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ಉಳ್ಳಾಲ ಜೆರೆ ಹತ್ತಿರ ನಡೆದಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ಲಿಖಿತ್ ಎನ್ನುವ ಮೇಲೆ ಲಾರಿ ಹರಿದು ಸಾವನ್ನಪ್ಪಿದ್ದು ಉಳ್ಳಾಲ ಕೆರೆ ಬಳಿ ಬೈಕ್ ಸವಾರ ಲಿಖಿತ್ (22) ಸ್ಥಳದಲ್ಲೇ ಸಾವನಪ್ಪಿದ್ದಾನೆ. ಉಳ್ಳಾಲ ಬಳಿಯ ಖಾಸಗಿ ಕಾಲೇಜಿನಲ್ಲಿ ನಿಖಿತ್ ವ್ಯಾಸಂಗ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು. ಲಾರಿ ಓವರ್ಟೇಕ್ ಮಾಡುವಾಗ ಲಿಖಿತ್ ಬೈಕ್ ನಲ್ಲಿ ತೆರಳುವ ಸಂದರ್ಭದಲ್ಲಿ ಟಿಪ್ಪರ್ ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾನೆ.
ಲಾರಿ ಹರಿದು ಸ್ಥಳದಲ್ಲೇ ಲಿಖಿತ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ ಅಲ್ಲದೆ ಹಿಂಬದಿ ಸವಾರ ಜ್ಞಾನೇಶ್ಗೆ ಗಂಭೀರವಾದೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಶವ ಪತ್ತೆ
ನಾಪತ್ತೆಯಾಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದೆ. ಶಾಬಾದ್ ಕ್ರಾಸ್ ಬಳಿ ಹೊಂಡದಲ್ಲಿ ಕಾರು ಕಲ್ಬುರ್ಗಿ ಜೀವರ್ಗಿ ರಸ್ತೆಯ ಶಹಾಬಾದ್ ಕ್ರಾಸ್ ನಲ್ಲಿ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿ 40 ವರ್ಷದ ಅಮೃತ್ ಎನ್ನುವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ,ಕಲ್ಬುರ್ಗಿ ಸಂಚಾರಿ ಠಾಣೆ ಒಂದರ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ