ಉತ್ತರಕನ್ನಡ : ಪ್ರವಾಸಕ್ಕೆ ಎಂದು ತೆರಳಿದ್ದ ವಿದ್ಯಾರ್ಥಿ ಒಬ್ಬ ಸಮುದ್ರದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ.
ಹೌದು ಬೆಂಗಳೂರಿನ ವಿದ್ಯಾಸೌಧ ಕಾಲೇಜಿನಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ತೆರಳಿದ್ದರು. ಇಂದು ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ, ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿಯಾಗಿದ್ದು, ಇನ್ನು ಬೆಂಗಳೂರಿನ ಧನುಶ್.ಡಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇಂದು ಮುರುಡೇಶ್ವರ ಕಡಲ ತೀರದಲ್ಲಿ ಧನುಷ್ ಮತ್ತು ಗೌತಮ್ ಇಬ್ಬರು ಸಮುದ್ರಕ್ಕೆ ಈಜಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಧನುಷ್ ಗೌತಮ್ ಇಬ್ಬರು ಮುಳುಗುತ್ತಿದ್ದರು. ಕೂಡಲೇ ಲೈಫ್ ಗಾರ್ಡ್ಸ್ ಧನುಷ್ನನ್ನು ರಕ್ಷಣೆ ಮಾಡಿದರು. ಆದರೆ ಧನುಷ್ ಗೌತಮ್ ಕೂಡ ಜೊತೆಯಲ್ಲಿ ನೀರಿಗೆ ಇಳಿದಿದ್ದನ್ನು ಅವರಿಗೆ ಹೇಳಲಿಲ್ಲ. ಹಾಗಾಗಿ ಧನುಷ್ ಮೃತಪಟ್ಟಿದ್ದಾನೆ.ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.