ದಕ್ಷಿಣಕನ್ನಡ : ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಮನೆಯನ್ನು ಅಲಂಕಾರ ಮಾಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ನಡೆದಿದೆ.
ಮೃತ ವಿಧ್ಯಾರ್ಥಿಯನ್ನು ತೆಂಕಕಾರಂದೂರಿನ ಸ್ಟೀಪನ್ (14) ಎಂದು ಗುರುತಿಸಲಾಗಿದೆ. ಪೆರೋಡಿತ್ತಾಯನ ಕಟ್ಟೆ ಶಾಲಾ ಬಳಿಯ ಮನೆಯ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಎನ್ನಲಾಗಿದೆ. ಕ್ರಿಸ್ ಮಸ್ ಪ್ರಯುಕ್ತ ಇಂದು ಸಂಜೆ ಮನೆಗೆ ಸಾಂತಕ್ರೊಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಆಲಂಕಾರ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ.
ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಬಂದರೂ ಅಷ್ಟೊತ್ತಿಗಾಗಲೇ ಮೃತ ಪಟ್ಡಿರುವುದಾಗಿ ತಿಳಿದು ಬಂದಿದೆ.ಮೃತ ವಿದ್ಯಾರ್ಥಿಯ ತಂದೆ ಹಾಗೂ ತಾಯಿ ಕೆಲವು ವರ್ಷಗಳ ಹಿಂದೆ ಮೃತ ಪಟ್ಟಿದ್ದರು ಈತ ಅಜ್ಜಿ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದರು. ಇಂದು ಶಾಲೆಗೆರಜೆ ಮಾಡಿ ಮನೆಯಲ್ಲಿ ಅಲಂಕಾರ ಮಾಡುತ್ತಿದ್ದ ಎನ್ನಲಾಗಿದೆ