ಬೀದರ್ : ಚಲಿಸುತ್ತಿದ್ದ ವಾಹನದಿಂದ ಬಿದ್ದು ವಿದ್ಯಾರ್ಥಿ ಒಬ್ಬ ಸಾವನಪ್ಪಿದ್ದು, ಆತನ ಜೊತೆಯಲ್ಲಿದ್ದಂತಹ ಇನ್ನೋರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾಮು ನಗರ್ ತಾಂಡಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಹಾಮು ನಗರ ತಾಂಡಾದ ನಿವಾಸಿ ಕೈಲಾಸ್ (14) ಎಂದು ತಿಳಿದು ಬಂದಿದೆ. ಮೃತ ಕೈಲಾಸ್ ಮುಡಬಿ ಗ್ರಾಮದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಗೆ ಕ್ರೂಸರ್ ವಾಹನದಲ್ಲಿ ಹಾಮು ನಗರ ತಾಂಡಾದಿಂದ ಮುಡಬಿ ಗ್ರಾಮಕ್ಕೆ ತೆರಳುತ್ತಿದ್ದ.
ಈ ವೇಳೆ ಕ್ರೂಸರಲ್ಲಿ ಹಿಂಬದಿ ಸೀಟಿನಲ್ಲಿ ಕೈಲಾಸ್ ಕೂತಿದ್ದ. ಏಕಾಏಕಿ ವಾಹನದ ಬಾಗಿಲು ಓಪನ್ ಆಗಿದ ಕೂಡಲೇ ಆತ ಆಯತಪ್ಪಿ ಕೆಳಗೆ ಬಿದ್ದಿದ್ದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನು ಆತನ ಜೊತೆಯಲ್ಲಿದ್ದಂತಹ ಇನೊಬ್ಬ ವಿದ್ಯಾರ್ಥಿ ದಿಲ್ಶ್ಯಾನ ಗಂಭೀರವಾಗಿ ಗಾಯಗೊಂಡಿದ್ದು ಘಟನೇ ಕುರಿತಂತೆ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.