ಉಡುಪಿ : ಮದರಸ ಹಾಸ್ಟೆಲ್ನಲ್ಲಿ ರಾತ್ರಿ ವೇಳೆ ಬಾತ್ರೂಂನಲ್ಲಿ ಮದರಸಾ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉಡುಪಿ ಜಿಲ್ಲೆಯ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಂಗನಕೆರೆಯಲ್ಲಿ ನಡೆದಿದೆ.
ಹೌದು ಸಿದ್ದಾಪುರ ಮೂಲದ ರಿಹಾನ್ ಬೇಗಮ್ ಎನ್ನುವವರ ಪುತ್ರ ಮಹಮ್ಮದ್ ಜಹೀದ್ (12) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ತಿಳಿಬಂದಿದೆ.ಮೃತ ಮಹಮ್ಮದ್ ಜಹೀದ್ ಕಳೆದ ನಾಲ್ಕು ತಿಂಗಳಿಂದ ಮದರಸ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ. ಹೇರಾಡಿ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ರಜೆಯಲ್ಲಿ ಮನೆಗೆ ತೆರಳಿದ್ದ ಜಹೀದ್ ರಜೆ ಮುಗಿಸಿ ಹಾಸ್ಟೆಲ್ ಮರಳಿದ್ದ.
ರಾತ್ರಿ ವೇಳೆ ಮದರಸ ಹಾಸ್ಟೆಲ್ ಬಾತ್ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ.ಸದ್ಯ ಮಗನ ಸಾವಿನ ಕುರಿತು ತಾಯಿ ರಿಹಾನ ಬೇಗಂ ಸಂಶಯ ವ್ಯಕ್ತಪಡಿಸಿದ್ದಾರೆ.ಘಟನೆ ಕುರಿತಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.