ಹಾವೇರಿ : ವಸತಿ ಶಾಲಾ ಶಿಕ್ಷಕನ ಕುಟುಂಬದ ಕಿರುಕುಳಕ್ಕೆ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹೌದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಅರ್ಚನಾ ಗೌಡನವರ್ (16) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಅರ್ಚನಾ ಹಿರೇಕೆರೂರು ತಾಲೂಕಿನ ದೂದಿಹಳ್ಲಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಅರ್ಚನಾ, ಶಿಕ್ಷಕ ಆರಿಫ್ ಉಲ್ಲಾ ಪುತ್ರಿ ಝೋಯಾ ಮತ್ತು ಅರ್ಚನಾ ಒಂದೇ ತರಗತಿಯಲ್ಲಿ ಓದುತ್ತಿದ್ದರು. ತರಗತಿಯಲ್ಲಿ ಶಿಕ್ಷಕನ ಪುತ್ರಿಗಿಂತಲೂ ಅರ್ಚನಾ ಓದಿನಲ್ಲಿ ಮುಂದಿದ್ದಳು.
ಮಗಳಿಗಿಂತ ಅರ್ಚನಾ ಬುದ್ದಿವಂತೆಯಾಗಿದ್ದಕ್ಕೆ ಮನೆಗೆ ಕರೆಸಿ, ಕಿರುಕುಳ ನೀಡಿದ್ದಾರೆ. ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ವಿದ್ಯಾರ್ಥಿನಿ ಅರ್ಚನಾ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಒಂದು ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆ ಮಾಡಿ ಅರ್ಚನಾ ಕುಟುಂಬ ಸದಸ್ಯರು ಸುಮ್ಮನಾಗಿದ್ದಾರೆ. ಸದ್ಯ ವಿದ್ಯಾರ್ಥಿನೀ ಮೃತ ದೇಹ ಮರಣೋತ್ತರ ಪರೀಕ್ಷೆ ಆಗಿರಲಿಲ್ಲ. ಹೀಗಾಗಿ ಮರುದಿನ ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿಗಳು ಮೃದೇವವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು ಮೃತ ವಿದ್ಯಾರ್ಥಿನಿ ಅರ್ಚನಾ ಸಂಬಂಧಿಕರು ಇದ್ದಾರೆ.