ಮ್ಯಾನ್ಮಾರ್ : ಕಳೆದ ಎರಡು ದಿನಗಳ ಹಿಂದೆ ಮ್ಯಾನ್ಮಾರ್ ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಈ ಒಂದು ಘಟನೆಯಲ್ಲಿ ಇದುವರೆಗೂ ಮ್ಯಾನ್ಮಾರ್ ನಲ್ಲಿ 1600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದು 3000ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಇದೀಗ ವರದಿಯಾಗಿದೆ
ಹೌದು ಭೂ ಕಂಪನದಲ್ಲಿ ಮೃತ ಪಟ್ಟವರ ಸಂಖ್ಯೆ 1,644ಕ್ಕೆ ಏರಿಕೆಯಾಗಿದ್ದು, 3408 ಜನರಿಗೆ ಗಾಯಗಳಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಭೀಕರವಾದ ಭೂಕಂಪದಿಂದ ನಲುಗಿ ಹೋದ ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ಗೆ ಇದೀಗ ಭಾರತ ಆಹಾರ ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗಿದೆ. ಭಾರತೀಯ ವಾಯುಪಡೆಯ C-17 ವಿಮಾನಗಳಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಈಗ ರವಾನಿಸಲಾಗಿದೆ. 60 ಟನ್ ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಭಾರತ ಮ್ಯಾನ್ಮಾರ್ ಗೆ ಕಳುಹಿಸಿದೆ.
ಬೆಂಗಳೂರಿನಿಂದ ಬ್ಯಾಂಕಾಕ್ ಪ್ರವಾಸಕ್ಕೆ ಎಂದು ತೆರಳಿದ್ದ ಕನ್ನಡಿಗರು ಇಂದು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕನ್ನಡಿಗರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಭೂಕಂಪದ ಅನುಭವವನ್ನು ಹಂಚಿಕೊಂಡರು. ಈ ವೇಳೆ ಕನ್ನಡಿಗರು ಯಾವುದೇ ತೊಂದರೆಗೆ ಸಿಲುಕದೆ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ.