ಬೆಂಗಳೂರು : ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಇದುವರೆಗೂ 1,600 ಜನರು ಈ ಒಂದು ಭೂಕಂಪನದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೆ 3000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪ್ರವಾಸಕ್ಕೆ ಎಂದು ಬ್ಯಾಂಕಾಕ್ ಗೆ ತೆರಳಿದ್ದ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನ್ನಡಿಗರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಇನ್ನು ಬ್ಯಾಂಕಾಕ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಕನ್ನಡಿಗರ ಪೈಕಿ ರೋಹಿತ್ ಎನ್ನುವವರು ಪತ್ನಿ ಮಕ್ಕಳ ಜೊತೆಗೆ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದರು. ಹೋಟೆಲ್ ನಲ್ಲಿ ಮಧ್ಯಾಹ್ನ ಊಟದ ವೇಳೆ ಭೂಕಂಪವಾಗಿತ್ತು. ಊಟ ಮಾಡದಿದ್ದಕ್ಕೆ ತಲೆ ತಿರುಗುವ ಅನುಭವವಾಗುತ್ತಿದೆ ಅಂದುಕೊಂಡಿದ್ವಿ. ಎಲ್ಲರಿಗೂ ಅದೇ ಅನುಭವ ಆದಾಗ ಭೂಕಂಪ ಎಂದು ಗೊತ್ತಾಯಿತು. ಹೋಟೆಲ್ ಸಿಬ್ಬಂದಿ ಕೊಡಲೇ ಎಲ್ಲರನ್ನು ಹೊರಗಡೆ ಕಳುಹಿಸಿದರು. ಸುಮಾರು 4 ಗಂಟೆಗಳ ಕಾಲ ಯಾರನ್ನು ಕಟ್ಟಡದ ಒಳಗೆ ಬಿಡಲಿಲ್ಲ.
ಪತ್ನಿ ಮಕ್ಕಳು ಸಮೇತ ಎಲ್ಲರೂ ರಸ್ತೆಯಲ್ಲಿ ನಿಂತಿದ್ದೆವು. ಅಂಗಡಿ ಮುಂಗಟ್ಟುಗಳಿಂದ ಎಲ್ಲರೂ ಹೊರಗೆ ಓಡೋಡಿ ಬಂದಿದ್ರು. ಹೋಟಲ್ ಬಳಿ ಕಟ್ಟಡದ ಮೇಲಿನ ಈಜುಕೊಳದ ನೀರು ಚೆಲ್ಲಿತ್ತು. ಎಲ್ಲರೂ ಆತಂಕದಿಂದ ರಸ್ತೆಯ ಮೇಲೆ ನಿಂತಿದ್ದೆವು.ಒಂದು ಬಾರಿ ಮಾತ್ರ ಭೂಕಂಪದ ಅನುಭವವಾಯಿತು. ಅಷ್ಟೇ ಅಲ್ಲದೇ ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಮಂಜಾಗ್ರತ ಕ್ರಮ ಕೈಗೊಂಡಿತ್ತು. ಭೂಕಂಪವಾದಾಗ ನಾಲ್ಕರಿಂದ ಐದು ಗಂಟೆ ಮಾತ್ರ ಟ್ರಾಫಿಕ್ ಜಾಮ್ ಆಗಿತ್ತು. ಏರ್ಪೋರ್ಟ್ ನಲ್ಲಿ ಎಂದನಂತೆ ವಿಮಾನ ಸಂಚಾರ ನಡೆಯುತ್ತಿತ್ತು. ನಾವು ಇಂದು ಫ್ಲೈಟ್ ಬುಕ್ ಮಾಡಿಕೊಂಡು ವಾಪಸ್ ಬಂದೆವು ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರೋಹಿತ್ ಪ್ರತಿಕ್ರಿಯಿಸಿದರು.