ಮಂಡ್ಯ : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದ ಘಟನೆಗೆ ಖಂಡಿಸಿ ನಿನ್ನೆ ಹಿಂದೂ ಸಂಘಟನೆ ಕಾರ್ಯಕರ್ತರು ಬ್ರಹತ್ ಪ್ರತಿಭಟನೆ ಮಾಡಿದ್ದರು ಇವೇ ಪ್ರತಿಭಟನೆಯಲ್ಲಿ ಕೂಡ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದರು. ಇದೀಗ ಪ್ರತಿಭಟನೆ ವೇಳೆ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಸೇರಿದಂತೆ ಪ್ರತಿಭಟನಾಕಾರರ ವಿರುದ್ಧ 2 ಪ್ರತ್ಯೇಕ ಎರಡು FIR ದಾಖಲಾಗಿದೆ.
ಹೌದು ಮಂಡ್ಯ ಜಿಲ್ಲೆಯ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ. ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಖಂಡಿಸಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ವೇಳೆ ಬಾವುಟ ಬಂಟಿಂಗ್ಸ್ ಗಳನ್ನು ಕಿತ್ತು ಎಸೆದಿದ್ದರು. ಮೆರವಣಿಗೆ ವೇಳೆ ಮಸೀದಿಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದರು.
ಆ ವೇಳೆ ಕಟ್ಟಡಕ್ಕೆ ಕಲ್ಲು ತೋರಿದ ವಿಚಾರವಾಗಿ ಮತ್ತೊಂದು FIR ದಾಖಲು ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರ ಮೇಲೆ ಹಲ್ಲೆ ಎಂದು ಕೇಸ್ ದಾಖಲಿಸಲಾಗಿದೆ. ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದ ಸೌಮ್ಯ, ಪಲ್ಲವಿ, ರಮ್ಯಾ ಸೇರಿದಂತೆ ಒಟ್ಟು 500 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ. BNS ಸೆಕ್ಷನ್ 189(2), 189(4), 121,121(2) 190ರೆಡಿ ಕೇಸ್ ದಾಖಲಾಗಿದೆ.