ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಇದೀಗ ಪ್ರತಿಭಟನೆ ವೇಳೆ ಲಾಠಿ ಏಟು ತಿಂದ ಮಹಿಳೆ ವಿರುದ್ಧವು FIR ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗು ಮುಸ್ಲಿಂರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮದ್ದೂರು ಶಿವಪುರ ನಿವಾಸಿ ಜ್ಯೋತಿ ವಿರುದ್ಧ FIR ದಾಖಲಾಗಿದೆ. ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮದ್ದೂರು ಠಾಣೆ ಪಿಐ ಶಿವಕುಮಾರ್ ದೂರು ಆಧರಿಸಿ FIR ದಾಖಲು ಮಾಡಲಾಗಿದೆ.
ಅನ್ಯಧರ್ಮಕ್ಕೆ ಧಕ್ಕೆಯಾಗುವ ಪದ ಬಳಕೆ ಮಾಡಿದ್ದು, ಕೋಮುಗಳ ನಡುವೆ ಪರಸ್ಪರ ವೈಮನಸ್ಸು ಉಂಟು ಮಾಡುವ ಹೇಳಿಕೆ, ವೈರತ್ವ ಉತ್ತೇಜನ ನೀಡುವ ಆರೋಪದಡಿ FIR ದಾಖಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿ ಹೇಳಿಕೆ ವೈರಲ್ ಆಗಿದೆ.a