Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮಗಿಷ್ಟವಾದ ಹಣ್ಣು ಯಾವುದು? ನೀವು ನಾಯಕ ಗುಣದವರೇ ಅಥವಾ ಸೃಜನಶೀಲರೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

45ರ ಪ್ರಾಯದಲ್ಲಿ 20ರ ಯುವಕನ ಮೇಲೆ ಕ್ರಶ್: ಈ ಆಕರ್ಷಣೆಯ ಹಿಂದಿನ ಅಸಲಿ ಕಾರಣವೇನು ಗೊತ್ತೇ?

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `ಟಿ.ನರಸೀಪುರದ ಕುಂಭಮೇಳ’ಕ್ಕೆ ಭರ್ಜರಿ ಸಿದ್ಧತೆ : ರಾಜ್ಯ ಸರ್ಕಾರದಿಂದ 6 ಕೋಟಿ ಅನುದಾನ ಬಿಡುಗಡೆ.!
KARNATAKA

BREAKING : `ಟಿ.ನರಸೀಪುರದ ಕುಂಭಮೇಳ’ಕ್ಕೆ ಭರ್ಜರಿ ಸಿದ್ಧತೆ : ರಾಜ್ಯ ಸರ್ಕಾರದಿಂದ 6 ಕೋಟಿ ಅನುದಾನ ಬಿಡುಗಡೆ.!

By kannadanewsnow57

ಬೆಂಗಳೂರು: ರಾಜ್ಯ ಸರ್ಕಾರದಿಂದ ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ ಮಾಡಿರುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ಟಿ.ನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದರು.

ರಾಜ್ಯ ಸರ್ಕಾರದಿಂದ ಫೆಬ್ರವರಿ 10, 11 ಹಾಗೂ 12ರಂದು ನಡೆಯಲಿರುವಂತ ಟಿ.ನರಸೀಪುರ ಕುಂಭಮೇಳಕ್ಕೆ 6 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಈ‌ ಪುಣ್ಯಸ್ನಾನವನ್ನು ಪ್ರಾರಂಭಿಸಲು ಪ್ರಮುಖರಾದವರು

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು
ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀಕ್ಷೇತ್ರ, ಶ್ರೀ ಆದಿಚುಂಚನಗಿರಿ,
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ,
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿಗಳವರು
ತಿರುಚ್ಚಿ ಮಹಾಸಂಸ್ಥಾನ ಮಠ, ಕೈಲಾಸಾಶ್ರಮ, ಬೆಂಗಳೂರು ರವರುಗಳು.

ದಕ್ಷಿಣ ಭಾರತದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವ ಸ್ಥಳ ಇದಾಗಿದೆ. ರಾಜ್ಯದಲ್ಲಿನ‌‌ ವಿವಿಧ ಮಠಗಳು ಹಾಗೂ ದೇವಾಲಗಳಿಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನದ ಅನುದಾನದಲ್ಲಿ ರೂ 6 ಕೋಟಿಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದಾರೆ. ಉಸ್ತುವಾರಿ ಸಚಿವರಾದ ಹೆಚ್.ಸಿ‌.ಮಹದೇವಪ್ಪ ಅವರು ಸಂಗಮದ ಪುಣ್ಯಕ್ಷೇತ್ರದಲ್ಲಿ ಫೆಬ್ರವರಿ 2025ರ ದಿನಾಂಕ 10, 11, 12ರಂದು ನಡೆಯುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಮತ್ತು ವಿಜೃಂಭಣೆಯಿಂದ ನಡೆಸಲು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಿರುಮಕೂಡಲು ನರಸೀಪುರ ( ಟಿ. ನರಸೀಪುರ) ಇಲ್ಲಿ ಸೇರುವ ನದಿಗಳ ಸಂಗಮದಲ್ಲಿ ಕಾವೇರಿ, ಕಬಿನಿ ಮತ್ತು ಸ್ಪಟಿಕ ಸರೋವರದ ಸಂಗಮ ಸ್ಪಟಿಕ ಸರೋವರ ಇದು ಗುಪ್ತ ಗಾಮಿನಿಯಾಗಿದೆ ಎಂದು ಹೇಳಲಾಗುತ್ತದೆ.

ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ‌ ಅನುದಾನ ಬಳಸಿಕೊಳ್ಳಲಾಗುವುದು.

ಕಳೆದ ಹನ್ನೊಂದು ಕುಂಭಮೇಳಗಳನ್ನು ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಎಲ್ಲಾ ಧರ್ಮಪೀಠಗಳ ನೇತೃತ್ವದಲ್ಲಿ ಸಾವಿರಾರು ಸಾಧು ಸಂತರು ಮತ್ತು ಲಕ್ಷಾಂತರ ಭಕ್ತಾದಿಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ 2022ರಲ್ಲಿ ನಡೆಯಬೇಕಿದ್ದ 12ನೇ ಕುಂಭಮೇಳ ನಡೆಯಲಿಲ್ಲ.

ಪ್ರಸ್ತುತ ನಡೆಯಲಿರುವ ಮಹಾಕುಂಭಮೇಳವು 12ನೇ ಕುಂಭಮೇಳವಾಗಿ, ಈ ಪುಣ್ಯಕ್ಷೇತ್ರದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಾಧುಸಂತರು ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

BREAKING : `ಟಿ.ನರಸೀಪುರದ ಕುಂಭಮೇಳ'ಕ್ಕೆ ಭರ್ಜರಿ ಸಿದ್ಧತೆ : ರಾಜ್ಯ ಸರ್ಕಾರದಿಂದ 6 ಕೋಟಿ ಅನುದಾನ ಬಿಡುಗಡೆ.! BREAKING: State govt releases Rs 6 crore for 'Kumbh Mela' in T. Narasipur
Share. Facebook Twitter LinkedIn WhatsApp Email

Related Posts

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

2 Mins Read

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

2 Mins Read

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

2 Mins Read
Recent News

ನಿಮಗಿಷ್ಟವಾದ ಹಣ್ಣು ಯಾವುದು? ನೀವು ನಾಯಕ ಗುಣದವರೇ ಅಥವಾ ಸೃಜನಶೀಲರೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

45ರ ಪ್ರಾಯದಲ್ಲಿ 20ರ ಯುವಕನ ಮೇಲೆ ಕ್ರಶ್: ಈ ಆಕರ್ಷಣೆಯ ಹಿಂದಿನ ಅಸಲಿ ಕಾರಣವೇನು ಗೊತ್ತೇ?

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

State News
KARNATAKA

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೀದರ್ : ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಅಡುಗೆ ಅನಿಲ ದರ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ ಎನ್.ಡಿ.ಎ.…

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.