ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಈ ನೆಲೆಯಲ್ಲಿ ಕುರಿಗಾಹಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಕುರಿಗಾಹಿಗಳ ರಕ್ಷಣೆಗಾಗಿ ಪ್ರತ್ಯೇಕ ಕಾನೂನು ರಚನೆ ಮಾಡಲು ಇದೀಗ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಹೌದು ಕುರಿಗಾಹಿಗಳ ದೌರ್ಜನ್ಯ ತಡೆಗಾಗಿ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಾಂಪ್ರದಾಯಿಕ ಕುರಿಗಾಹಿಗಳ ರಕ್ಷಣೆಗೆ ಪ್ರತ್ಯೇಕ ವಿಧೇಯಕ ತರಲು ಚಿಂತನೆ ನಡೆಸಲಾಗುತ್ತಿದೆ. ಪಶು ಸಂಗೋಪನ ಇಲಾಖೆಯಿಂದ ವಿಧೇಯಕ ಮಂಡನೆಗೆ ತಯಾರಿ ಮಾಡಲಾಗುತ್ತಿದ್ದು, ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ವಲಸೆ ಕುರಿಗಾಹಿಗಳ ಆಸ್ತಿಪಾಸ್ತಿಗಳ ಒತ್ತುವರಿ ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕುರಿಗಾಹಿಗಳ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸಲು ಚಿಂತನೆ ನಡೆಸುತ್ತಿದೆ.
ಅಲ್ಲದೆ ಇತ್ತೀಚೆಗೆ ಅಷ್ಟೇ ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದ ಬಳಿ, ರಾತ್ರಿಯ ವೇಳೆ ಕುರಿಗಳನ್ನು ಕಳ್ಳತನ ಮಾಡಲು ದುಷ್ಕರ್ಮಿಗಳು ಬಂದಿದ್ದರು. ಇವಳೆ ಕುರಿಗಾಹಿ ಓರ್ವನನ್ನು ಹಿಡಿದಿದ್ದ, ಆದರೆ ಉಳಿದವರು ಬಂದು ಆತನ ಮೇಲೆ ಹಲ್ಲೆ ನಡೆಸಿ ಕೊಡಲಿಯಿಂದ ಕೊಚ್ಚಿ ಭೀಕವಾಗಿ ಕೊಲೆ ಮಾಡಿದ್ದರು. ಹಾಗಾಗಿ ಕುರಿಗಾಹಿಗಳ ರಕ್ಷಣೆಗಾಗಿ ಪ್ರತ್ಯೇಕ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.