ಬೆಂಗಳೂರು : ಜಾಹೀರಾತು ಹೋರ್ಡಿಂಗ್ ಗಳಿಗೆ ಸರ್ಕಾರ ಇದೀಗ ಹೊಸ ನೀತಿ ಜಾರಿ ಮಾಡಿದ್ದು, ಹೊರ್ಡಿಂಗ್ಸ್ ಜಾಹಿರಾತಿಗೆ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆಗೆ ಮತ್ತೆ ಹೊಸ ನೀತಿ ಜಾರಿ ಮಾಡಲಾಗಿದೆ. ಹೊಸ ಷರತ್ತುಗಳೊಂದಿಗೆ ಜಾಹಿರಾತು ಅಳವಡಿಕೆಗೆ ಅನುಮತಿ ನೀಡಲಾಗುತ್ತದೆ. ಬಿಬಿಎಂಪಿ 204ರ ಬೈಲಾ ಪ್ರಕಾರ ಜಾಹಿರಾತಿಗೆ ಅನುಮತಿ ನೀಡಲಾಗುತ್ತದೆ.
ಹೌದು 60 ಅಡಿಗಿಂತ ಹೆಚ್ಚು ವಿಸ್ತರಣೆ ಇರುವ ರಸ್ತೆಗಳಲ್ಲಿ ಜಾಹಿರಾತು ಅಳವಡಿಸಲು ಮತ್ತೆ ಅವಕಾಶವಿದ್ದು, ಖಾಸಗಿ ಜಾಗಗಳಲ್ಲಿ ಹೊರ್ಡಿಂಗ್ ಅಳವಡಿಕೆಗೆ ಅವಕಾಶ ನೀಡಲಾಗುತ್ತದೆ. ಬಿಬಿಎಂಪಿ ಆಸ್ತಿ ತೆರಿಗೆ ಪಟ್ಟಿಯಲ್ಲಿದ್ದ ಸ್ಥಳದಲ್ಲಿ ನಿರ್ಬಂಧ ವಿಧಿಸಲಾಗಿದೆ. ಖಾತಾ ಹೊಂದಿರದ ಜಾಗದಲ್ಲಿ ಜಾಹೀರಾತಿಗೆ ಯಾವುದೇ ಅವಕಾಶವಿಲ್ಲ. ಒಂದೇ ಜಾಗದಲ್ಲಿ ಎರಡು ಹೋರ್ಡಿಂಗ್ ಅಳವಡಿ ಅವಕಾಶ ಇಲ್ಲ ಎಂದು ಬಿಬಿಎಂಪಿ ತಿಳಿಸಿದೆ.