ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 19 ಡಿವೈಎಸ್ಪಿ ಹಾಗೂ 53 ಪೊಲೀಸ್ ಇನ್ಸ್ ಪೆಕ್ಟರ್ ಸಿವಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ವರ್ಗಾವಣೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಆಂತರಿಕ ಭದ್ರತ ವಿಭಾಗದ ಡಿವೈಎಸ್ಪಿಯಾಗಿದ್ದಂತ ಗಣೇಶ್ ಎಂ ಹೆಗಡೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಶೇಷಾದ್ರಿಪುರಂ ಉಪ ವಿಭಾಗದ ಡಿವೈಎಸ್ಪಿ ಪ್ರಕಾಶ್.ಆರ್ ಅವರನ್ನು ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ, ಸಿಸಿಪಿಎಸ್ ಡಿವೈಎಸ್ಪಿ ನಾಗರಾಜ.ಜಿ ಅವರನ್ನು ವಿಜಯಪುರ ಉಪ ವಿಭಾಗಕ್ಕೆ, ಮೈಸೂರಿನ ಕೆಪಿಎ ಡಿವೈಎಸ್ಪಿ ಮೊಹಮ್ಮದ ಹಸ್ಮತ್ ಖಾನ್.ಐ ಅವರನ್ನು ಹೊಳೆನರಸೀಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 19 ಡಿವೈಎಸ್ಪಿ ವರ್ಗಾವಣೆ ಪಟ್ಟಿ


ಇನ್ನೂ 53 ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಬಿ ಪಾಟೀಲ್ ಅವರನ್ನು ಇಂಡಿ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣೆಗೆ ಮಹಮ್ಮದ್ ಸಿರಾಜ್ ಅವರನ್ನು ವರ್ಗಾವಣೆ ಮಾಡಿದ್ದರೇ, ಕೊಪ್ಪಳದ ಗಂಗಾವತಿಯಿಂದ ಪ್ರಕಾಶ್ ಎಲ್ ಮಾಳಿ ಅವರನ್ನು ಚಿಕ್ಕಮಗಳೂರಿನ ಕೊಪ್ಪ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ತುಮಕೂರಿನ ತುರುವೆಕೆರೆ ವೃತ್ತದಿಂದ ಲೋಹಿತ್ ಬಿ.ಎಂ ಅವರನ್ನು ಮಂಗಳೂರಿನ ಕೊಣಾದೆ ಪೊಲೀಸ್ ಠಾಣೆಗೆ, ಕೃಷ್ಣ ಕುಮಾರ್ ಅವರನ್ನು ಕಲಬುರ್ಗಿಯ ಸುಲೆಪೇಟ್ ವೃತ್ತಕ್ಕೆ, ಪುರುಷೋತ್ತಮ್ ಜಿ ಅವರನ್ನು ಚಿತ್ರದುರ್ಗ ಡಿಎಸ್ ಬಿಗೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 53 ಪೊಲೀಸ್ ಇನ್ಸ್ ಪೆಕ್ಟ್ ಗಳ ವರ್ಗಾವಣೆ ಪಟ್ಟಿ










