ಚಾಮರಾಜನಗರ : ಇದೇ ಫೆಬ್ರವರಿ 17ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಈ ಒಂದು ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಹೌದು ಫೆಬ್ರವರಿ 17 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಇದೀಗ ಮುಂದೂಡಲಾಗಿದೆ. ಅಲ್ಲದೇ ಫೆಬ್ರವರಿ 16ರಂದು ನಿಗದಿಯಾಗಿದ್ದ ಫಲಾನುಭವಿಗಳ ಸಮಾವೇಶವ ಕೂಡ ಇದೀಗ ಮುಂದೂಡಲಾಗಿದೆ. ಚಾಮರಾಜನಗರದಲ್ಲಿ ನಿಗದಿಯಾಗಿದ್ದ ಫಲಾನುಭವಿಗಳ ಸಮಾವೇಶ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಂಪುಟ ಸಭೆ ಸಮಾವೇಶಕ್ಕೆ ಚಾಮರಾಜನಗರ ಜಿಲ್ಲಾ ಆಡಳಿತ ಸಿದ್ಧತೆ ನಡೆಸಿತ್ತು.