ಬೆಂಗಳೂರು : ಬಜೆಟ್ ಪೂರ್ವಭಾವಿ ಸಭೆ ವಿಳಂಬ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಬಗ್ಗೆ ತಯಾರಿ ನಡೆಯುತ್ತದೆ ಬರುವ ಮಾರ್ಚ್ ನಲ್ಲಿ ಬಜೆಟ್ ಮಂಡನೆ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.
ದಲಿತ ಸಿಎಮ್ ಬಗ್ಗೆ ಡಾ. ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪರಮೇಶ್ವರ್ ಅವರು ಸಹ ಸೀನಿಯರ್. ಅವರು ದಲಿತ ನಾಯಕರು. ನಾನು ಸಹ ಸಿಎಂ ಆಗಬಹುದು ಅಂತ ಪರಮೇಶ್ವರ್ ಹೇಳಿದ್ದಾರೆ. ನಾಯಕತ ವಿಚಾರ ಸ್ಥಳೀಯ ಚುನಾವಣೆಯ ಮೇಲೆ ಪ್ರಭಾವವಿರಲ್ಲ. ಈಗಲೇ ಏನು ಹೇಳಲು ಆಗಲ್ಲ ಆದ ಮೇಲೆ ಹೇಳಬಹುದು ಗೊಂದಲ ಬಗೆಹರಿಸಬೇಕು ಅಂತ ನಾಯಕರಿಗೆ ಹೇಳಿದ್ದೇವೆ. ಬೆಂಗಳೂರು ಸಭೆ ದೆಹಲಿಯಲ್ಲಿ ಆಯ್ತು ಎರಡು ಸಭೆಗಳು ಅಲ್ಲಿ ಆಯ್ತು ಅದಕ್ಕೆ ಸುರ್ಜೆವಾಲಾ ಬಂದಿಲ್ಲ ಎಂದು ತಿಳಿಸಿದರು
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಘರ್ಷಣೆಯಾಗಿ ಫೈರಿಂಗ್ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ವಿಚಾರವಾಗಿ ಮನೆಯ ಮುಂದೆ ಪೋಸ್ಟರ್ ಕಟ್ಟಿದಕ್ಕೆ ಗಲಾಟೆ ಆಗಿದೆ. ನಾಳೆ ಸಂಜೆ ಉದ್ಘಾಟನೆಗೆ ಹೋಗಬೇಕಿತ್ತು, ಘಟನೆಯ ಸತ್ಯಾಂಶ ಗೊತ್ತಾಗಬೇಕು ಅಂದರೆ ತನಿಖೆ ಆಗಬೇಕು ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಆಗಲಿ ಗೊತ್ತಾಗುತ್ತದೆ. ಉದ್ದೇಶಪೂರ್ವಕನ ಅಂತ ಗೊತ್ತಿಲ್ಲ ಯಾರು ಏಕೆ ಮಾಡಿದ್ರು ಅಂತ ತನಿಖೆ ಇಂದ ಹೊರಬರಲಿ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.








