ಬೆಂಗಳೂರು : ಬೆಂಗಳೂರಲ್ಲಿ ಆಗಾಗ ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಕರಣಗಳು ನಡೆದಿದೆ ಇದೀಗ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿ ಒಬ್ಬರು ಆಯತಪ್ಪಿ ಹಳಿಗೆ ಬಿದ್ದಿರುವ ಘಟನೆ ಬೆಂಗಳೂರಿನ ರಾಗಿಗುಡ್ಡ ಮೆಟ್ರೋದಲ್ಲಿ ನಡೆದಿದೆ.
ಹೌದು ರಾಗಿ ಗುಡ್ಡ ಮೆಟ್ರೋ ಸ್ಟೇಷನ್ ನಲ್ಲಿ ಮೆಟ್ರೋ ಸಿಬ್ಬಂದಿ ಒಬ್ಬರು ಹಾಗೆ ಹಳಿಯ ಸಮೀಪ ನಡೆದುಕೊಂಡು ಹೋಗುವಾಗ ಆಯತಪ್ಪಿ ಮೆಟ್ರೋ ಹಳಿಯ ಮೇಲೆ ಬೀಳುತ್ತಾರೆ ಇದನ್ನು ನೋಡಿದ ತಕ್ಷಣ ಅಲ್ಲಿಯೇ ಇದ್ದ ಪ್ರಯಾಣಿಕನೊಬ್ಬ ಸಿಬ್ಬಂದಿಯನ್ನು ಕೈಹಿಡಿದು ಮೇಲಕ್ಕೆ ಎತ್ತುತ್ತಾನೆ. ಅದೃಷ್ಟಶಾತ್ ಈ ವೇಳೆ ಮೆಟ್ರೋ ರೈಲು ಸಂಚರಿಸಿಲ್ಲ. ಸಿಬ್ಬಂದಿ ಬಿದ್ದಾಗ ಮೆಟ್ರೋ ರೈಲ್ವೆ ಏನಾದ್ರು ಬಂದಿದ್ದರೆ ಸಿಬ್ಬಂದಿ ಜೀವಕ್ಕೆ ಅಪಾಯವಿತ್ತು. ಇದೀಗ ಈ ಒಂದು ವಿಡಿಯೋ ವೈರಲಾಗಿದೆ.
WATCH: #BengaluruMetro witnessed a close call this morning when a security guard accidentally fell onto the track at the newly opened Raggigudda station on the #YellowLine. The incident occurred around 11.10 a.m. on August 25.
Read Full Article: https://t.co/cMYXiVRXQN pic.twitter.com/pnuEQXOZHw
— Darshan Devaiah B P (@DarshanDevaiahB) August 25, 2025