ಚಿತ್ರದುರ್ಗ : ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ ಮಾಡಿದ್ದಾರೆ. ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಸದ್ಯ ವೈರಲ್ ಆಗಿದೆ. ಸಿಬ್ಬಂದಿ ವರ್ಗ ಕಾರು ಖರೀದಿ ಹಿನ್ನೆಲೆಯಲ್ಲಿ ಕಚೇರಿಯಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಮಧ್ಯ ಬೆರೆಸಿದ ವಾಟರ್ ಕ್ಯಾನ್ ಕಚೇರಿಗೆ ತಂದಿದ್ದ ಸಿಬ್ಬಂದಿಗಳು ಫುಲ್ ಎಣ್ಣೆ ಪಾರ್ಟಿ ಮಾಡಿದ್ದಾರೆ. ಹೌದು ಚಿತ್ರದುರ್ಗದ ಡಿಡಿಪಿಐ ಕಚೇರಿಯಲ್ಲಿ ಹೊಸ ಕಾರು ಖರೀದಿ ಮಾಡುವ ಖುಷಿಯಲ್ಲಿ ಕ್ಯಾನ್ ತುಂಬ ಬಿಯರ್ ತಂದು ಕಚೇರಿಯಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ ಸದ್ಯಕ್ಕೆ ಈ ಒಂದು ವಿಡಿಯೋ ಭಾರಿ ವೈರಲ್ ಆಗಿದೆ. ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಗಳು ಕುಡಿದು ಮೂರು ಮಾಸ್ತಿ ಮಾಡಿದ್ದಾರೆ ಡಿಡಿಪಿಐ ಮಂಜುನಾಥ್ ಕಾರು ಚಾಲಕ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.