ಬಳ್ಳಾರಿ : ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರೋದು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಕೇಸ್. ಕನ್ನಡ ಯೂಟ್ಯೂಬ್ ಜಗತ್ತಿನಲ್ಲೊಂದು ಸಂಚಲನ ಸೃಷ್ಟಿಯಾಗಿದೆ. ಈವರೆಗೆ ಇಂಗ್ಲೀಷ್ , ಹಿಂದಿ ಯೂಟ್ಯೂಬ್ ಚಾನಲ್ ಗಳಲ್ಲಿ ಮಾತ್ರ ಕಾಣಲು ಸಿಗುತ್ತಿದ್ದ ಕೋಟಿಗಟ್ಟಲೆ ವೀಕ್ಷಣೆ, ಲಕ್ಷಗಟ್ಟಲೆ ಲೈಕ್ಸ್, ಸಾವಿರ ಸಾವಿರ ಕಮೆಂಟುಗಳು ಕನ್ನಡ ಯೂಟ್ಯೂಬ್ ಚಾನಲ್ ಒಂದರ ವಿಡಿಯೋಗೆ ಸಿಕ್ಕಿವೆ
ಹೌದು ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸಮೀರ್ ನನ್ನು ಬಂಧಿಸಲು ಪೊಲೀಸರು ಬಳ್ಳಾರಿಗೆ ತೆರಳಿದ್ದಾಗ ಈ ವೇಳೆ ಸಮೀರ್ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ ಮೇಲೆ ಆತನಿಗೆ ನೋಟಿಸ್ ನೀಡಿ ಪೊಲೀಸರು ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ, ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ ಬರುವಂತೆ ಹೇಳುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದು ಸಮೀರ್ ಎಂಡಿ ಹೇಳಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಗಿರೀಶ್ ಮಟ್ಟನವರ್, ಸಮೀರ್ ತಮ್ಮ ವಿಡಿಯೋದಲ್ಲಿ ಯಾರ ಹೆಸರನ್ನು ಬಳಸಿಲ್ಲ. ಇನ್ನು ದೇವಸ್ಥಾನದ ಕುರಿತು ಯಾವುದೇ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿಲ್ಲ. ಸುಪ್ರೀಂಕೋರ್ಟ್‌ಗೆ ಅವರೇ ಬರೆದುಕೊಟ್ಟಂತಹ ಹೇಳಿಕೆಯನ್ನು ಸಮೀರ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಸೌಜನ್ಯಳನ್ನು ನಿಮ್ಮ ಮನೆ ಮಗಳು ಎಂದು ತಿಳಿದುಕೊಳ್ಳಿ ಎಂದು ಮನವಿ ಮಾಡಿಕೊಡರು.
ಹೀಗೆ ಸಮೀರ್ ವಿಡಿಯೊ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳ ಕೆಲ ತುಣುಕುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹೀಗೆ ವೈರಲ್ ಆದ ಬೆನ್ನಲ್ಲೇ ಸಮೀರ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದು, ತನಗೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿಕೊಂಡಿದ್ದಾರೆ.
ತಾವೇ ಮಾತನಾಡಿರುವ ವಿಡಿಯೊ ಹಂಚಿಕೊಂಡಿರುವ ಸಮೀರ್ ಮೊದಲಿಗೆ ‘ನ್ಯಾಯ ಕೇಳೋದ್ರಲ್ಲೂನೂ ಜಾತಿ – ಧರ್ಮ ಎಲ್ಲಿಂದ ಬಂತೋ ನನಗೆ ಗೊತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮತ್ತೊಂದು ಸ್ಟೋರಿಯಲ್ಲಿ ‘ನನ್ನ ಮನೆ ಅಡ್ರೆಸ್ ಲೀಕ್ ಮಾಡಿರೋರಿಗೆ, ನನ್ನ ಫೋನ್ ನಂಬರ್ ಲೀಕ್ ಮಾಡಿರೋರಿಗೆ ನನ್ನ ಹುಡುಕೊಂಡು ಬಂದು ಹೊಡಿಯೋದು ಕಷ್ಟ ಆಗಲ್ಲ. ಹೀಗಾಗಿ ಕನ್ನಡ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೈ ಮುಗಿದು ಕೇಳಿಕೊಳ್ತೀನಿ ಈ ವಿಷಯವಾಗಿ ನಿಮ್ಮ ದನಿ ಎತ್ತಿ’ ಎಂದು ಸಮೀರ್ ಹೇಳಿದ್ದಾರೆ.