ಹಾಸನ : ತನ್ನ ತಂದೆಯನ್ನು ಕೊಂದಿದ್ದಾನೆ ಎಂದು ಹದಿಮೂರು ವರ್ಷಗಳ ಸೇಡನ್ನು ಇಟ್ಟುಕೊಂಡು ವ್ಯಕ್ತಿ ಒಬ್ಬ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ಭೀಕರವಾಗಿ ಕೊಚ್ಚಿ, ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ತಂದೆಯನ್ನು ಕೊಂದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ವ್ಯಕ್ತಿಯೊಬ್ಬ ಭೀಕರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದಡದಹಳ್ಳಿಯಲ್ಲಿ ಘಟನೆ ನಡೆದಿದೆ.2011ರಲ್ಲಿ ಲಕ್ಕಪ್ಪ ಕೊಲೆ ಪ್ರಕರಣದಲ್ಲಿ ನಿರ್ವಾಣಪ್ಪ (77) ಎನ್ನುವ ಆರೋಪಿ ಜೈಲು ಸೇರಿದ್ದ.
ಇತ್ತೀಚಿಗೆ ನಿರ್ವಾಣಪ್ಪ ಜೈಲಿನಿಂದ ಬಿಡುಗಡೆ ಆಗಿದ್ದ. ನಿನ್ನೆ ನಿರ್ವಾಣಪ್ಪನನ್ನು ಲಕ್ಕಪ್ಪನ ಪುತ್ರ ಮೂರ್ತಿ ಎನ್ನುವವನು ಕೊಚ್ಚಿ ಕೊಲೆ ಮಾಡಿದ್ದಾನೆ. ತಂದೆಯ ಹತ್ಯೆಯ ಸೇಡಿಗಾಗಿ 13 ವರ್ಷಗಳ ಬಳಿಕ ಆರೋಪಿಯನ್ನು ಕೊಲೆ ಮಾಡಿದ್ದಾನೆ. ಹತ್ಯೆಯ ಕುರಿತಂತೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.