ಬೆಳಗಾವಿ : ಸ್ಕೂಟಿ ಕಿ ಕೊಡಲಿಲ್ಲವೆಂದು ಕೋಪಗೊಂಡು ಚಿಕ್ಕಮ್ಮನನ್ನೇ ಮಗನೊಬ್ಬ ರಾಡ್ ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.
ಜನವರಿ 8ರಂದು ಈ ಘಟನೆ ಸಂಭವಿಸಿದ್ದು, ಮಗನಿಂದ ಹತ್ಯೆಗೆ ಒಳಗಾದ ಚಿಕ್ಕಮ್ಮನನ್ನು ಮಂಗಳ ಸಾವರ್ಡ್ಕರ್ ಎಂದು ಹೇಳಲಾಗುತ್ತಿದ್ದು, ಆರೋಪಿ ಸಂಜಯ್ ಸವಾಡ್ಕರ್ ಚಿಕ್ಕಮ್ಮನ ಬಳಿ ಸ್ಕೂಟಿ ಕಿ ಕೇಳಿದ್ದಾನೇ ಆಗ ಚಿಕ್ಕಮ್ಮ ಸ್ಕೂಟಿ ಕಿ ಕೊಡಲವೆಂದು ತಿಳಿಸಿದಾಗ ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯದು ವಿಕೋಪಕ್ಕೆ ತಿರುಗಿದಾಗ ಸಂಜಯ್ ಅಲ್ಲೇ ಇದ್ದ ರಾಡ್ ನಿಂದ ಚಿಕ್ಕಮಗೆ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಚಿಕ್ಕಮ್ಮಗೆ ಬಲವಾಗಿ ಹೊಡೆದ ನಂತರ ಸಂಜಯ್ ಅಲ್ಲಿಂದ ಕಾಲ್ ಕಿತ್ತಿದ್ದಾನೆ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸಂಜಯ್, ತನ್ನ ಚಿಕ್ಕಮ್ಮನ ಬಳಿ ಸ್ಕೂಟಿ ಕಿ ಸಲುವಾಗಿ ಜಗಳ ತೆಗೆದು ಈ ರೀತಿ ಕೊಲೆ ಮಾಡಿದ್ದಾನೆ. ಇದೀಗ ಅಥಣಿ ಪೊಲೀಸ್ ಠಾಣೆಯಲ್ಲಿ ಕಡಿಮೆ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.