ಚಿಕ್ಕಮಗಳೂರು : ಹೆತ್ತ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆಲ್ದುರು ಠಾಣೆಯ ಪೊಲೀಸರು ಹಂತಕ ಪವನ್ (25) ನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು.
ಗ್ರಾಮದ ನಿರ್ಜನ ಪ್ರದೇಶದ ಒಂಟಿಮನೆಯಲ್ಲಿ ಹೆತ್ತ ತಾಯಿಯನ್ನೇ ಪವನ್ ಕೊಲೆ ಮಾಡಿದ. ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ತಾಯಿಯನ್ನು ಪವನ್ ಕೊಂದಿದ್ದ ಕೊಡಲಿಂದ ಕೊಚ್ಚಿ ಭವಾನಿ (55) ಕೊಲೆ ಮಾಡಿದ್ದ. ಹಣಕ್ಕಾಗಿ ನಿನ್ನೆ ತಾಯಿಯ ಜೊತೆ ಪುತ್ರ ಪವನ್ ಜಗಳ ಮಾಡಿದ್ದಾನೆ. ಈ ವೇಳೆ ಕೊಡಲಿಯಿಂದ ಕೊಚ್ಚಿ ತಾಯಿ ಭವಾನಿಯನ್ನು ಕೊಲೆ ಮಾಡಿದ್ದಾನೆ.ತಾಯಿ ಭವಾನಿ ಹತ್ಯೆಯ ಮಾಡಿದ ನಂತರ ಪವನ್ ಶವದ ಪಕ್ಕದಲ್ಲಿಯೇ ಮಲಗಿದ್ದ ಎನ್ನಲಾಗಿದೆ.
ಈ ವೇಳೆ ಪವನ್ ತಾಯಿಯ ಶವ ಸುಟ್ಟು ಹಾಕಲು ನೋಡಿದ್ದಾನೆ. ಅರ್ಧಂಬರ್ಧ ಸುಟ್ಟ ಶವದ ಪಕ್ಕವೇ ಆರೋಪಿ ಪವನ್ ಮಲಗಿದ್ದ ಆರೋಪಿ ಪವನ್ ಬೆಂಗಳೂರಿನಲ್ಲಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ತಿಂಗಳ ಹಿಂದೆ ಪವನ್ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಹಕ್ಕಿ ಮಕ್ಕಿ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ ಅರೆನೂರು ಗ್ರಾಮದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಹಕ್ಕಿಮಕ್ಕಿ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.