ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ತನ್ನ ಕಣ್ಣೆದುರೇ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದ ಮಾವನನ್ನು ಅಳಿಯೊನೊಬ್ಬ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಹೌದು ಬೆಂಗಳೂರಿನಲ್ಲಿ ತಂದೆ ಕೊಲೆ ಪ್ರತೀಕಾರಕ್ಕೆ ಮಾವನ ಬರ್ಬರ ಹತ್ಯೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ ಸಿರಾಜ್ (32) ಎನ್ನುವ ವ್ಯಕ್ತಿಯನ್ನು ಅಳಿಯ ಫಹಾದ್ ಹತ್ಯೆಗೈದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕೊಲೆ ನಡೆದಿದೆ. ಆರೋಪಿ ಚಿಕ್ಕವನಿದ್ದಾಗ ಆತನ ತಂದೆಯನ್ನು ಸಿರಾಜ್ ಕೊಲೆ ಮಾಡಿದ್ದ. ಕಣ್ಣೆದುರೇ ಆತನ ತಂದೆಯನ್ನು ಸಿರಾಜ್ ಕೊಚ್ಚಿ ಕೊಲೆ ಮಾಡಿದ್ದ.
ಇದೀಗ 16 ವರ್ಷಗಳ ಸೇಡಿಗಾಗಿ ಮಾವ ಸಿರಾಜ್ ನನ್ನು ಫಹಾದ್ ಹತ್ಯೆಗೈದಿದ್ದಾನೆ. ತಂದೆ ಅನ್ಸರ್ ಪಾಷಾ ನನ್ನು ಸಿರಾಜ್ 16 ವರ್ಷಗಳ ಹಿಂದೆ ಕೊಲೆ ಮಾಡಿದ್ದ. ಅನ್ವರ್ ಪಾಷಾ ಹತ್ಯೆ ಪ್ರಕರಣದಲ್ಲಿ ಸಿರಾಜ್ 10 ವರ್ಷ ಜೈಲಿನಲ್ಲಿ ಇದ್ದ ಸದ್ಯ ಕೊಲೆಯಾದ ಸಿರಾಜ್ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ. ನಿನ್ನೆ ರಾತ್ರಿ ನಡು ರಸ್ತೆಯಲ್ಲಿಯೇ ಅಟ್ಟಾಡಿಸಿ ನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಫಹಾದ್ ನನ್ನು ಸದ್ಯ ರಾಮಮೂರ್ತಿನಗರ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.