ತುಮಕೂರು : ಮಗಳ ಹಾಗೂ ಅಳಿಯನ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಈ ವೇಳೆ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಅತ್ತೆಗೆ ಅಳಿಯ ದೊಣ್ಣೆಯಿಂದ ಬಲವಾಗಿ ತಲೆಗೆ ಹೊಡೆದ ಪರಿಣಾಮವಾಗಿ ಅತ್ತೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅಶ್ವಿತ್ ಉನ್ನಿಸಾ (58) ಕೊಲೆಯಾದ ಮಹಿಳೆಯಾಗಿದ್ದು, ಸೈಯದ್ ಸುಹೇಲ್ ಕೊಲೆಗೈದ ಆರೋಪಿಯಾಗಿದ್ದಾನೆ.ಸೈಯದ್ ಸುಹೇಲ್ ಮತ್ತು ಪತ್ನಿಯ ನಡುವೆ ಜಗಳ ನಡೆದಿದ್ದು, ಈ ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಪತಿ ಗಲಾಟೆ ಮಾಡುತ್ತಿದ್ದಾನೆ ಎಂದು ತುಮಕೂರು ತಾಲೂಕಿನ ಬೆಳಗುಂಬದಲ್ಲಿರುವ ತನ್ನ ತಾಯಿ ಅಶ್ವಿತ್ ಉನ್ನಿಸಾಗೆ ಮಗಳು ಫೋನ್ ಮಾಡಿದ್ದಳು. ಹೀಗಾಗಿ ಕಲಹ ನಿವಾರಿಸಲು ಅಳಿಯನ ಮನೆಗೆ ಬಂದಿದ್ದ ಅಶ್ವಿತ್ ಉನ್ನಿಸಾ ಹೋಗಿದ್ದಾರೆ.
ಈ ವೇಳೆ ಅಳಿಯ ಸೈಯದ್ ಸುಹೇಲ್ ಅತ್ತೆ ಮೇಲೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಉನ್ನಿಸಾ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಕೋಡಿಗೆನಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.