ಮಂಡ್ಯ : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಪಾರ್ಥಿವ ಶರೀರವು ಇದೀಗ ಅವರ ಹುಟ್ಟುವದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ತಲುಪಿದೆ. ಇವಳೇ ದಾರಿ ಉದ್ದಕ್ಕೂ ಸಹಸ್ರಾರು ಜನರು ಎಸ್ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಇಂದು ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಿಂದ ಹೊರಟ ಅವರ ಪಾರ್ಥಿವ ಶರೀರವು, ಬಿಡದಿ ರಾಮನಗರ ಚನ್ನಪಟ್ಟಣದ ಮೂಲಕ ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ತಲುಪಿದೆ. ಈ ವೇಳೆ ಸೋಮನಹಳ್ಳಿಯ ಗ್ರಾಮದ ಎಲ್ಲಾ ಜನರು ಎಸ್ಎಮ್ ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಈಗಾಗಲೇ ಸೋಮನಹಳ್ಳಿ ಗ್ರಾಮದಲ್ಲಿ ಭಾನುಪ್ರಕಾಶ್ ಅವರು ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಲಿದೆ. ಸ್ಥಳದಲ್ಲಿ ಸಚಿವ ಚೆಲುವರಾಯಸ್ವಾಮಿ ಅಂತ್ಯಕ್ರಿಯೆ ಸಕಲ ಸಿದ್ಧತೆ ಪರಿಶೀಲನೆ ಮಾಡಿದರು.